ಶಿವಮೊಗ್ಗ (shivamogga), ಜೂನ್ 20: ಮನೆಯಲ್ಲಿಯೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊ**ಲೆ ಮಾಡಿರುವ ಘಟನೆ, ಜೂನ್ 19 ರ ರಾತ್ರಿ ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ (29) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಈತ ಟ್ರ್ಯಾಕ್ಟರ್ ಬಾಡಿಗೆ ಕೆಲಸ ಮಾಡುತ್ತಿದ್ದ. ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ ಕೆಲಸಕ್ಕೆ ತೆರಳಿರಲಿಲ್ಲ.
ಈತನೊಂದಿಗೆ ಕೆಲಸಕ್ಕೆ ತೆರಳಬೇಕಾಗಿದ್ದ ಯುವಕರು, ಮನೆಗೆ ಆಗಮಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಲೆಗೆ ಹೊಡೆದು ಕೊ**ಲೆ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shivamogga: Brutal m**ur**der of a youth at home!
Shivamogga, June 20: A shocking incident occurred on the night of June 19 in Suttukote village of Shivamogga taluk, where a young man was brutally m**ur**dered inside his house with deadly weapons.
The victim has been identified as Praveen (29). He was engaged in tractor rental work. After having dinner, he went to sleep at home but did not leave for work the next morning.
When his co-workers, who were supposed to go to work with him, came to his house to check, the incident came to light. He was k**il**led by blows to the head. Upon receiving the information, Kunsi Police arrived at the spot and conducted an investigation.

