shimoga crime news | ಶಿವಮೊಗ್ಗ : ನಡು ರಸ್ತೆಯಲ್ಲಿಯೇ ಸ್ವಂತ ಅಜ್ಜಿಯನ್ನೇ ಹತ್ಯೆಗೈದ ಮೊಮ್ಮಗ!

murder
ಶಿವಮೊಗ್ಗ, ಜುಲೈ 01: ನಡು ರಸ್ತೆಯಲ್ಲಿಯೇ ಮೊಮ್ಮಗನೋರ್ವ, ಸ್ವಂತ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯಲ್ಲಿ ಜುಲೈ 01 ರ ಸಂಜೆ ನಡೆದಿದೆ.
ಸುಶೀಲಮ್ಮ (65) ಕೊಲೆಗೀಡಾದ ಅಜ್ಜಿ ಎಂದು ಗುರುತಿಸಲಾಗಿದೆ. ಕಿಶೋರ (28) ಆರೋಪಿತ ಮೊಮ್ಮಗ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈತನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಅಜ್ಜಿ ಇಹಲೋಕ ತ್ಯಜಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಪಿ ನಿಖಿಲ್ ಬಿ ಸೇರಿದಂತೆ ದೊಡ್ಡಪೇಟೆ ಠಾಣೆ ಪೊಲೀಸರ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಕಾರಣವೇನು? : ಆರೋಪಿತ ಮೊಮ್ಮಗ ಗಾಂಜಾ ವ್ಯಸನಿಯಾಗಿದ್ದ. ಈ ಬಗ್ಗೆ ಅಜ್ಜಿಯು ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಮೊಮ್ಮಗನು ರಸ್ತೆಯಲ್ಲಿಯೇ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *