shimoga court news | ತೀರ್ಥಹಳ್ಳಿ ಬಿದರುಗೋಡು ಗ್ರಾಮದಲ್ಲಿ ಮಹಿಳೆಯ ಕೊಲೆ ಪ್ರಕರಣ – ಜೀವಾವಧಿ ಶಿಕ್ಷೆ!

Woman's murder case in bidaragodu village, Thirthahalli – Life imprisonment! | Shivamogga, July 10: The 3rd Additional District and Sessions Court of Shivamogga has sentenced a person who murdered a woman and dumped her body in a well in a farm in bidaragodu village, Thirthahalli taluk, to life imprisonment, the verdict of which was delivered on 09/07/2026. 

ಶಿವಮೊಗ್ಗ (shivamogga), ಜುಲೈ 10: ತೀರ್ಥಹಳ್ಳಿ ತಾಲೂಕಿನ ಬಿದರುಗೋಡು ಗ್ರಾಮದ ಜಮೀನೊಂದರಲ್ಲಿ, ಮಹಿಳೆಯ ಕೊಲೆ ಮಾಡಿ ಶವವನ್ನು ಬಾವಿಗೆ ಹಾಕಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 09/07/2026 ರಂದು ತೀರ್ಪು ನೀಡಿದೆ.

ರಾಜಪ್ಪ (36) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂ. ದಂಡವನ್ನು ಕೂಡ ನ್ಯಾಯಾಲಯ ವಿಧಿಸಿದೆ.

ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಾಂತರಾಮ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 18-12-2022 ರಂದು ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮದ ಜಮೀನೊಂದರಲ್ಲಿ ಅಪರಾಧಿ ರಾಜಪ್ಪ ಹಾಗೂ ಪಾರ್ವತಮ್ಮರವರು ಅಡಿಕೆ ಸಸಿ ನೆಡುವ ಕೆಲಸ ಮಾಡುತ್ತಿದ್ದರು.

ಈ ವೇಳೆ ರಾಜಪ್ಪನು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ನಂತರ ಗುದ್ದಲಿಯಿಂದ ಮಹಿಳೆಯ ತಲೆ ಹಾಗೂ ಕಿವಿಯ ಬಳಿ ಹೊಡೆದು ಕೊಲೆ ಮಾಡಿದ್ದ.

ತದನಂತರ ಜಮೀನಿನಲ್ಲಿ ಬಿದ್ದಿದ್ದ ಕಪ್ಪು ಬಣ್ಣದ ಡ್ರಿಪ್ ಪೈಪ್ ನ್ನು ಮಹಿಳೆಯ ಹೊಟ್ಟೆಗೆ ಕಟ್ಟಿ, ಜಮೀನಿನಲ್ಲಿರುವ ಬಾವಿಗೆ ಶವವನ್ನು ಹಾಕಿದ್ದ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 86/2022 ಐಪಿಸಿ ಕಲಂ 354, 354 A(1) (i), 354 A (1) (ii), 302, 201 ರ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್’ಪೆಕ್ಟರ್ ಪ್ರವೀಣ್ ನೀಲಮ್ಮನವರ್ ರವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Woman’s murder case in bidaragodu village, Thirthahalli – Life imprisonment! | Shivamogga, July 10: The 3rd Additional District and Sessions Court of Shivamogga has sentenced a person who murdered a woman and dumped her body in a well in a farm in bidaragodu village, Thirthahalli taluk, to life imprisonment, the verdict of which was delivered on 09/07/2026.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *