ಶಿವಮೊಗ್ಗ (shivamogga), ಜುಲೈ 10: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಯೋಜನೆ ಬದಲಿಗೆ, ಹಾಲಿ ರಸ್ತೆಯನ್ನೇ ಬಲವರ್ಧನೆಗೊಳಿಸಿ ಅಭಿವೃದ್ದಿಗೊಳಿಸುವುದು ಸೂಕ್ತವಾಗಿದೆ ಎಂದು ಹಿರಿಯ ಎಂಜಿನಿಯರ್ ಬಿ ಎಸ್ ಬಾಲಕೃಷ್ಣರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಅವರು ಫೇಸ್’ಬುಕ್ ತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈಗಿರುವ ಘಾಟಿ ರಸ್ತೆಯನ್ನೇ ಉತ್ತಮ ರೀತಿಯಲ್ಲಿ ಪುನರ್ ನಿರ್ಮಾಣಗೊಳಿಸಿದರೆ, ಎಲ್ಲ ಹವಾಮಾನದಲ್ಲಿಯೂ ಬಳಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಘಾಟಿ ರಸ್ತೆಯಲ್ಲಿ ಇಳಿಜಾರು ಕುಸಿತಕ್ಕೆ ಸಮರ್ಪಕ ನಿರ್ವಹಣೆಯ ಕೊರತೆ ಕಾರಣವಾಗಿದೆ. ನಿಯಮಿತವಾಗಿ ಇಳಿಜಾರು ಸ್ಥಿರೀಕರಣ ಕ್ರಮಗಳನ್ನು ಕೈಗೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಸದರಿ ಹೆದ್ದಾರಿಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬೇಕಾಗಿಲ್ಲ. ಭಾರೀ ವಾಹನ ಹಾಗೂ ಉದ್ದವಾದ ವಾಹನಗಳನ್ನು ಬೇರೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಸದ್ಯ ಆಗುಂಬೆ ಘಾಟಿ ರಸ್ತೆಯಲ್ಲಿ ಅಂದಾಜು ಮಾಡಲಾಗಿರುವ ವಾಹನಗಳ ಸಂಚಾರ ದಟ್ಟಣೆ, ವಾಸ್ತವ ಸಂಚಾರ ದಟ್ಟಣೆಗಿಂತ ಹೆಚ್ಚಿಗೆ ತೋರಿಸಲಾಗಿದೆ. ಇದು ಸರಿಯಲ್ಲವೆಂದು ಎಂದು ಹೇಳಿದ್ದಾರೆ.
ಆಗುಂಬೆ ಘಾಟಿಯಲ್ಲಿ ಸುರಂಗ ನಿರ್ಮಾಣ ಯೋಜನೆಯು ದೀರ್ಘಾವಧಿಯದ್ದಾಗಿದೆ. 2000 ಕೋಟಿ ರೂ. ಮೀಸಲಿಡಲಾಗುತ್ತಿದೆ. ಯೋಜನೆ ಪೂರ್ಣಗೊಳ್ಳಬೇಕಾದರೆ ಹಲವು ವರ್ಷಗಳೇ ಬೇಕಾಗುತ್ತದೆ. ಇದರಿಂದ ನಾಗರಿಕರಿಗೆ ತೊಂದರೆಯಾಗಲಿದೆ.
ಈ ಕಾರಣದಿಂದ ಪ್ರಸ್ತುತ 30 ಕೋಟಿ ರೂ. ವೆಚ್ಚ ಮಾಡಿದರೆ, ಘಾಟಿ ರಸ್ತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಲವರ್ಧನೆ ಮಾಡಬಹುದಾಗಿದೆ ಎಂದು ಬಿ ಎಸ್ ಬಾಲಕೃಷ್ಣರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Agumbe Ghati Tunnel Project: What is Engineer B S Balakrishna’s suggestion? | Shivamogga, July 10: Senior Engineer B S Balakrishna has expressed the opinion that instead of the tunnel construction project on the Agumbe Ghati National Highway in Thirthahalli taluk, it would be appropriate to strengthen and develop the existing road.

