ಶಿವಮೊಗ್ಗ (shivamogga), ಜುಲೈ 14: ಶಾಲಾ ಆವರಣದಲ್ಲಿಯೇ ಕಾರೊಂದು ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಬಾಲಕ ಮೃತಪಟ್ಟು ಮತ್ತೋರ್ವ ಬಾಲಕ ಗಾಯಗೊಂಡ ದಾರುಣ ಘಟನೆ, ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದ ಅಲ್ಪಲಾ ಖಾಸಗಿ ಶಾಲೆ ಬಳಿ 14/07/2026 ರ ಸಂಜೆ ನಡೆದಿದೆ.
ದೊಣಬಘಟ್ಟ ಗ್ರಾಮದ ನಿವಾಸಿ, ಎಲ್’ಕೆಜಿ ಅಭ್ಯಾಸ ಮಾಡುತ್ತಿದ್ದ ಮಹಮ್ಮದ್ ಮುನಾವರ್ ತೈಫ್ (04) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕನ ಸ್ವಂತ ಅಣ್ಣ, 2 ನೇ ತರಗತಿ ಅಭ್ಯಾಸ ನಡೆಸುತ್ತಿದ ಮಹಮ್ಮದ್ ನುಜೇರ್ (8) ಎಂಬ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಜೆ 4.30 ರ ವೇಳೆ ಶಾಲೆ ಬಿಟ್ಟ ನಂತರ ಅಣ್ಣ – ತಮ್ಮ ಇಬ್ಬರು ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ಶಾಲಾ ಆವರಣಕ್ಕೆ ಆಗಮಿಸಿದ್ದ ಎಂ ಜೆ ಹೆಕ್ಟೇರ್ ಕಾರು ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯರು ಭದ್ರಾವತಿ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಪುಟಾಣಿ ಮಹಮ್ಮದ್ ಮುನಾವರ್ ತೈಫ್ ಇಹಲೋಕ ತ್ಯಜಿಸಿದ್ದಾನೆ ಎಂದು ತಿಳಿದುಬಂದಿದೆ.
ಶಾಲಾ ಆವರಣದಲ್ಲಿಯೇ ನಡೆದ ಸದರಿ ಘಟನೆಯು ಪೋಷಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ಚಿದಾನಂದ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhadravati: Car hits students inside school premises – one boy dies, another injured! | Shivamogga, July 14: A horrific incident took place on the evening of 14/07/2026 near Alpala Private School in Donabaghatta village of Bhadravati taluk, in which a car hit two children inside the school premises, killing one boy and injuring another.

