ಶಿವಮೊಗ್ಗ (shivamogga), ಜುಲೈ 12: ಶಿವಮೊಗ್ಗ ನಗರದ ಹೊರವಲಯ ಮತ್ತೋಡು ಸಮೀಪದ ಫಾರ್ಚೂನ್ ಬಡಾವಣೆಯ ಉದ್ಯಾನವನದಲ್ಲಿ ಜುಲೈ 12 ರಂದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶ್ರೀವಿನಾಯಕ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಶ್ರೀ ವಿನಾಯಕ ಮಹಿಳಾ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಫಾರ್ಚೂನ್ ಹೋಂ ಲೇಔಟ್, ಧನಲಕ್ಷ್ಮೀ ಲೇಔಟ್, ಬೃಂದಾವನ ಲೇಔಟ್, ವಿಭು ಲೇಔಟ್, ಸಾಲ್ಡಾನಾ ಲೇಔಟ್, ಜೆ ಪಿ ಲೇಔಟ್, ವಿಜಯಲಕ್ಷ್ಮೀ ಬಡಾವಣೆ, ಶ್ರೀಧರ್ ಲೇಔಟ್ ನಿವಾಸಿಗಳು ಉದ್ಯಾನವನ ಸ್ವಚ್ಛಗೊಳಿಸಿ, ಸುಮಾರು 200 ಗಿಡಗಳನ್ನು ನೆಟ್ಟು ಪಾಲನೆ – ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಹೆಚ್, ಸಿಮ್ಸ್ ಕಾಲೇಜ್ ನ ಚರ್ಮ ವಿಭಾಗದ ಹೆಚ್ಓಡಿ ಡಾ. ದಾದಾಪೀರ್ ಹೆಚ್ ಜೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ನ ಪ್ರೊಫೆಸರ್ ಡಾ. ಮಂಜುನಾಥ್ ಎಂ, ಚರ್ಮರೋಗ ತಜ್ಞರಾದ ಡಾ. ಆದಿನಾಥ್ ಭಂಡರಾಕರ್, ಪರಿಸರ ಪ್ರೇಮಿ ನವಶ್ರೀ ನಾಗೇಶ್ ಡಿ, ಪತ್ರಕರ್ತರಾದ ಬಿ ರೇಣುಕೇಶ್ ಅವರು ಭಾಗಿಯಾಗಿದ್ದರು.
ಉಳಿದಂತೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಿದ್ದೇಶ್ವರಪ್ಪ ವೈ ಎಂ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷ ಸತೀಶ್ ಕೆ ಎಲ್, ಕಾರ್ಯದರ್ಶಿ ಬಸವರಾಜಪ್ಪ ಜಿ ಪಿ, ಜಂಟಿ ಕಾರ್ಯದರ್ಶಿ ಸತೀಶ್ ಎ ಜಿ, ಖಜಾಂಚಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕಣ್ಣದಾಸ್ ಕುಮಾರ್,
ಮಹಿಳಾ ಸಂಘದ ಅಧ್ಯಕ್ಷರಾದ ಗೀತಾ ರಂಗನಾಥ್, ಉಪಾಧ್ಯಕ್ಷೆ ಛಾಯಾ, ಕಾರ್ಯದರ್ಶಿ ಪುಷ್ಪ ಕುಮಾರ್, ಖಜಾಂಚಿ ಸೌಮ್ಯ ಬಸವರಾಜ್, ಸಂಘಟನಾ ಕಾರ್ಯದರ್ಶಿ ರಶ್ಮಿ ಎಂ, ಸಹ ಕಾರ್ಯದರ್ಶಿ ಮಧು ಅರುಣ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಉಪಸ್ಥಿತರಿದ್ದರು.
Shivamogga: Residents take responsibility for cleaning the dilapidated park, planting and nurturing trees
Shivamogga, July 12: Residents of the surrounding areas organized a tree planting program on July 12 in the park of Fortune Layout near Mattodu on the outskirts of Shivamogga city. The program was organized under the joint auspices of Sri Vinayak Residents’ Welfare Association and Sri Vinayak Women’s Welfare Association.
Residents of Fortune Home Layout, Dhanalakshmi Layout, Brindavan Layout, Vibhu Layout, Saldana Layout, JP Layout, Vijayalakshmi Layout, Sridhar Layout cleaned the park, planted about 200 trees and took responsibility for their care and nurturing.
The chief guests for the program were Abbalagere Gram Panchayat PDO Rajappa H, SIMS College Dermatology Department HOD Dr. Dadapeer H J, Subbaiah Medical College Professor Dr. Manjunath M, Dermatologist Dr. Adinath Bhandarakar, environmentalist Navashri Nagesh D, and journalist B Renukesh.
The rest of the residents’ association president Siddeshwarappa YM, honorary president Shekharappa, vice president Satish KL, secretary Basavarajappa GP, joint secretary Satish AG, treasurer Arun Kumar, organizing secretary Kannadas Kumar, women’s association president Geetha Ranganath, vice president Chhaya, secretary Pushpa Kumar, treasurer Soumya Basavaraj, organizing secretary Rashmi M, joint secretary Madhu Arun Kumar, office bearers of the association and residents of the surrounding areas were present.

