shimoga news | ಶಿವಮೊಗ್ಗ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

Shivamogga, July 13: An awareness program was organized for school children on July 13 at the residential school of Sadashivpura Hakpikki Camp under B Beeranahalli Gram Panchayat limits of Shivamogga taluk in collaboration with the District Administration, Zilla Panchayat, District Police Department, Women and Child Development Department, District Child Protection Unit, Gram Panchayat Health Department, Education and Literacy Department.

ಶಿವಮೊಗ್ಗ (shivamogga), ಜುಲೈ 13: ಶಿವಮೊಗ್ಗ ತಾಲೂಕಿನ ಬಿ ಬೀರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ನ ವಸತಿ ಶಾಲೆಯಲ್ಲಿ ಜುಲೈ 13 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮ ಪಂಚಾಯ್ತಿ ಆರೋಗ್ಯ ಇಲಾಖೆ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳು, ಸಾಮಾಜಿಕ ಜಾಲತಾಣ ಸುರಕ್ಷತೆ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ, ಮಕ್ಕಳ ಸಾಗಾಣಿಕೆ, ಬಾಲ ಗರ್ಭಿಣಿ, ಬಾಲ ಕಾರ್ಮಿಕತೆ ದತ್ತು ನಿಯಮಾವಳಿ ಹಾಗೂ ಪೋಷಕತ್ವ ಯೋಜನೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು. ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಆತಿಥಿಯಾಗಿ ಬಿ ಬೀರಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸಂತೋಷ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಾಕೀರ್ ಹುಸೇನ್, ಸಿಡಿಪಿಓ ಕಚೇರಿಯ ವಲಯ ಮೇಲ್ವಿಚಾರಕರಾದ ಮಧು ಮಾಲತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಭರತ್ ಎಸ್ ಎಂ ಹಾಗೂ ಮಕ್ಕಳ ಸಹಾಯವಾಣಿ ಸಂಯೋಜಕರಾದ ಅಭಿಷೇಕ್ ಅವರು ಉಪಸ್ಥಿತರಿದ್ದರು.

Shivamogga: District Child Protection Unit organizes awareness program for school children

Shivamogga, July 13: An awareness program was organized for school children on July 13 at the residential school of Sadashivpura Hakpikki Camp under B Beeranahalli Gram Panchayat limits of Shivamogga taluk in collaboration with the District Administration, Zilla Panchayat, District Police Department, Women and Child Development Department, District Child Protection Unit, Gram Panchayat Health Department, Education and Literacy Department.

Students were informed about the Juvenile Justice Act, Prohibition of Child Marriage Act, POCSO Act, child rights, social media safety, bringing school dropouts back to school, child trafficking, child pregnancy, child labor, adoption rules and parenting plan.

Tajuddin Khan, Chairman of the District Child Welfare Committee, inaugurated the program and spoke. Students were informed about various topics. He advised them to inculcate a good personality.

The chief guests at the event were B Beerinahalli Gram Panchayat PDO Santosh, Deputy District Health Education Officer Zakir Hussain, CDPO Office Zonal Supervisor Madhu Malathi, District Child Protection Unit Protection Officer Bharat S.M. and Child Helpline Coordinator Abhishek.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *