ಶಿವಮೊಗ್ಗ (shivamogga), ಜುಲೈ 13: ಶಿವಮೊಗ್ಗ ನಗರದ ಸೋಮಿನಕೊಪ್ಪದ ಎಂ.ಎ.ಎಂ.ಇ.ಎಸ್ ಸರ್ಕಾರಿ ಶಾಲೆ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಬೆಳೆದಿದ್ದ ಪೊದೆ, ಗಿಡಗಂಟೆಗಳನ್ನು ಜುಲೈ 13 ರಂದು ಮಹಾನಗರ ಪಾಲಿಕೆ ಆಡಳಿತ ಜೆಸಿಬಿ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದೆ.
ಕಳೆದ ಹಲವು ದಿನಗಳಿಂದ ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಪೊದೆ, ಗಿಡಗಂಟೆ ಬೆಳೆದುನಿಂತಿತ್ತು. ಹುಳುಹುಪ್ಪಟ್ಟೆ, ವಿಷಜಂತುಗಳ ಹಾವಳಿ ಹೆಚ್ಚಾಗಿತ್ತು.
ಇತ್ತೀಚೆಗೆ ನಾಗರಹಾವೊಂದು ಶಾಲೆಯ ಸಮೀಪ ಕಾಣಿಸಿಕೊಂಡಿತ್ತು. ಇದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿತ್ತು. ಶಾಲೆ ಸುತ್ತಮುತ್ತಲಿನ ಅವ್ಯವಸ್ಥೆಯ ಸರಿಪಡಿಸಿ ಕೊಡುವಂತೆ ಮಹಾನಗರ ಪಾಲಿಕೆ ಆರೋಗ್ಯ – ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಪ್ರಭಾಕರ್ ಅವರಿಗೆ ಪೋಷಕರು ಮನವಿ ಮಾಡಿದ್ದರು.
ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಪ್ರಭಾಕರ್ ಅವರು, ಸೋಮವಾರ ಜೆಸಿಬಿ ಚಾಲಕ ಬಸವರಾಜ್ ಮೂಲಕ ಶಾಲಾ ಸುತ್ತಮುತ್ತಲು ಬೆಳೆದಿದ್ದ ಭಾರೀ ಪ್ರಮಾಣದ ಗಿಡಗಂಟೆ, ಪೊದೆಗಳನ್ನು ತೆರವುಗೊಳಿಸಿ ಕೊಟ್ಟಿದ್ದಾರೆ.
ಪಾಲಿಕೆ ಆಡಳಿತದ ತ್ವರಿತ ಸ್ಪಂದನೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಜೆಸಿಬಿ ಚಾಲಕ ಬಸವರಾಜ್ ಅವರಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
Why did government school children express gratitude to the Shivamogga Municipal Corporation administration?
Shivamogga, July 13: The municipal corporation administration cleared and cleaned the bushes and shrubs that had grown in large quantities around the M.A.M.E.S. Government School in Sominakoppa, Shivamogga city, on July 13 using a JCB.
For the past several days, a large number of bushes and shrubs had grown in the area around the school. There was an increase in the infestation of worms and poisonous insects.
Recently, a cobra was seen near the school. This made the students afraid to walk on the road. In this context, the parents had requested Prabhakar, Assistant Executive Engineer (AEE) of the Municipal Corporation Health and Environment Department, to fix the mess around the school.
Prabhakar responded quickly and cleared the large number of bushes and shrubs that had grown around the school using JCB driver Basavaraj on Monday.
Students, teachers and parents have expressed their appreciation for the quick response of the corporation administration. They thanked the corporation’s JCB driver Basavaraj by shaking his hand.

