ಶಿವಮೊಗ್ಗ, ಆಗಸ್ಟ್ 29: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ದಕ್ಷಿಣ ಕರಾವಳಿ ರೈಲ್ವೆಯು ಮಚಲಿಪಟ್ಟಣಂ-ಶಿವಮೊಗ್ಗ ಟೌನ್ ಮತ್ತು ಶಿವಮೊಗ್ಗ ಟೌನ್-ಗುಂತಕಲ್ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ ನಡೆಸಲಿದೆ.
01. ರೈಲು ಸಂಖ್ಯೆ 07217/07218 ಮಚಲಿಪಟ್ಟಣಂ–ಶಿವಮೊಗ್ಗ ಟೌನ್–ಮಚಲಿಪಟ್ಟಣಂ ವಿಶೇಷ ಎಕ್ಸ್’ಪ್ರೆಸ್ (1 ಟ್ರಿಪ್): ರೈಲು ಸಂಖ್ಯೆ 07217 ಮಚಲಿಪಟ್ಟಣಂ–ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ವಿಶೇಷ ರೈಲು, ದಿನಾಂಕ 30.08.2026 (ಭಾನುವಾರ) ರಂದು ಮಚಲಿಪಟ್ಟಣಂನಿಂದ 15:55 ಗಂಟೆಗೆ ಹೊರಟು, 31.08.2026 (ಸೋಮವಾರ) 15:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 07218 ಶಿವಮೊಗ್ಗ ಟೌನ್–ಮಚಲಿಪಟ್ಟಣಂ ವಿಶೇಷ ಎಕ್ಸ್’ಪ್ರೆಸ್ ರೈಲು, ದಿನಾಂಕ 02.09.2026 (ಬುಧವಾರ) ರಂದು ಶಿವಮೊಗ್ಗ ಟೌನ್’ನಿಂದ 17:40 ಗಂಟೆಗೆ ಹೊರಟು, 03.09.2026 (ಗುರುವಾರ) 15:55 ಗಂಟೆಗೆ ಮಚಲಿಪಟ್ಟಣಂ ತಲುಪಲಿದೆ.
ಮಾರ್ಗಮಧ್ಯೆ ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಗುಡಿವಾಡ ಜಂಕ್ಷನ್, ವಿಜಯವಾಡ ಜಂಕ್ಷನ್, ಕೃಷ್ಣ ಕೆನಾಲ್ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ ಪೇಟೆ, ಡೊಣಕೊಂಡ, ಮಾರ್ಕಾಪುರ ರೋಡ್, ಕಂಬಂ, ಗಿದ್ದಲೂರು, ನಂದ್ಯಾಲ ಜಂಕ್ಷನ್, ಬೇತಂಚೆರ್ಲ, ಡೋಣ ಜಂಕ್ಷನ್, ಗುತ್ತಿ ಜಂಕ್ಷನ್, ಅನಂತಪುರ, ಧರ್ಮವರಂ ಜಂಕ್ಷನ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಹಿಂದೂಪುರ, ಯಲಹಂಕ ಜಂಕ್ಷನ್, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
02. ರೈಲು ಸಂಖ್ಯೆ 07219/07220 ಶಿವಮೊಗ್ಗ ಟೌನ್–ಗುಂತಕಲ್–ಶಿವಮೊಗ್ಗ ಟೌನ್ ವಿಶೇಷ ಎಕ್ಸ್’ಪ್ರೆಸ್ ರೈಲು (1 ಟ್ರಿಪ್): ರೈಲು ಸಂಖ್ಯೆ 07219 ಶಿವಮೊಗ್ಗ ಟೌನ್–ಗುಂತಕಲ್ ವಿಶೇಷ ಎಕ್ಸ್’ಪ್ರೆಸ್ ರೈಲು, ದಿನಾಂಕ 31.08.2026 (ಸೋಮವಾರ) ರಂದು ಶಿವಮೊಗ್ಗ ಟೌನ್’ನಿಂದ 17:40 ಗಂಟೆಗೆ ಹೊರಟು, 01.09.2026 (ಮಂಗಳವಾರ) 07:00 ಗಂಟೆಗೆ ಗುಂತಕಲ್ ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 07220 ಗುಂತಕಲ್–ಶಿವಮೊಗ್ಗ ಟೌನ್ ವಿಶೇಷ ಎಕ್ಸ್’ಪ್ರೆಸ್ ರೈಲು, ದಿನಾಂಕ 02.09.2026 (ಬುಧವಾರ) ರಂದು ಗುಂತಕಲ್’ನಿಂದ 01:45 ಗಂಟೆಗೆ ಹೊರಟು, ಅದೇ ದಿನ 15:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
ಮಾರ್ಗಮಧ್ಯೆ ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ತರೀಕೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತಿಪಟೂರು, ತುಮಕೂರು, ಯಲಹಂಕ ಜಂಕ್ಷನ್, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮವರಂ ಜಂಕ್ಷನ್, ಅನಂತಪುರ ಮತ್ತು ಗುತ್ತಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 20 ಐಸಿಎಫ್ ಬೋಗಿಗಳನ್ನು ಒಳಗೊಂಡಿರಲಿವೆ.
Special Trains between Machilipatnam–Shivamogga Town and Shivamogga Town–Guntakal
South Coast Railway has notified the running of special trains between Machilipatnam–Shivamogga Town and Shivamogga Town–Guntakal to clear the extra rush of passengers.
*1. Train No. 07217/07218 Machilipatnam–Shivamogga Town–Machilipatnam Express Special (1 Trip):*
Train No. 07217 Machilipatnam–Shivamogga Town Express Special will depart from Machilipatnam at 15:55 hrs on Sunday, 30.08.2026, and will arrive at Shivamogga Town at 15:00 hrs on Monday, 31.08.2026.
In the return direction, Train No. 07218 Shivamogga Town–Machilipatnam Express Special will depart from Shivamogga Town at 17:40 hrs on Wednesday, 02.09.2026, and will reach Machilipatnam at 15:55 hrs on Thursday, 03.09.2026.
En route, the special train will have stoppages at Gudivada Jn., Vijayawada Jn., Krishna Canal Jn., Guntur Jn., Narasaraopet, Donakonda, Markapur Road, Cumbum, Giddalur, Nandyal Jn., Betamcherla, Dhone Jn., Gooty Jn., Anantapur, Dharmavaram Jn., Sri Sathya Sai Prasanthi Nilayam, Hindupur, Yelahanka Jn., Tumakuru, Tiptur, Arsikere, Birur Jn., Tarikere and Bhadravati stations in both directions.
*2. Train No. 07219/07220 Shivamogga Town–Guntakal–Shivamogga Town Express Special (1 Trip):*
Train No. 07219 Shivamogga Town–Guntakal Express Special will depart from Shivamogga Town at 17:40 hrs on Monday, 31.08.2026, and will reach Guntakal at 07:00 hrs on Tuesday, 01.09.2026.
In the return direction, Train No. 07220 Guntakal–Shivamogga Town Express Special will depart from Guntakal at 01:45 hrs on Wednesday, 02.09.2026, and will reach Shivamogga Town at 15:00 hrs on the same day.
En route, it will have stoppages at Bhadravati, Tarikere, Birur Jn., Arsikere Jn., Tiptur, Tumakuru, Yelahanka Jn., Hindupur, Sri Sathya Sai Prasanthi Nilayam, Dharmavaram Jn., Anantapur and Gooty stations in both directions.
These special trains will comprise 20 ICF coaches, including 1 AC First Class, 1 AC 2-Tier Coach, 2 AC 3-Tier Coaches, 9 Sleeper Class Coaches, 5 General Second Class Coaches and 2 Second Class Luggage Cum Brake Van coaches.

