shimoga news | ಶಿವಮೊಗ್ಗ : ತುಂಗಾ ನದಿಗೆ ಜಿಗಿದು ಬಂಡೆ ಮೇಲೆ ಕುಳಿತ ಯುವತಿ – ಅಗ್ನಿಶಾಮಕ ದಳದಿಂದ ರಕ್ಷಣೆ!

ಶಿವಮೊಗ್ಗ (shivanogga), ಸೆಪ್ಟೆಂಬರ್ 10 : ತುಂಗಾ ನದಿಗೆ ಜಿಗಿದು ನೀರಿನ ನಡುವಿನ ಬಂಡೆ ಮೇಲೆ ಕುಳಿತುಕೊಂಡಿದ್ದ ಯುವತಿಯೋರ್ವಳನ್ನು, ಅಗ್ನಿಶಾಮಕ ದಳದ ತಂಡ ರಕ್ಷಣೆ ಮಾಡಿದ ಘಟನೆ ಸೆಪ್ಟೆಂಬರ್ 10 ರ ಸಂಜೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಬಡಾವಣೆಯೊಂದರ ನಿವಾಸಿ 19 ವರ್ಷದ ಯುವತಿಯೇ ತುಂಗಾ ನದಿಗೆ ಜಿಗಿದವರಾಗಿದ್ದಾರೆ. ಬೋಟ್ ಮೂಲಕ ತೆರಳಿದ ಅಗ್ನಿಶಾಮಕ ತಂಡ, ಯುವತಿಯನ್ನು ರಕ್ಷಿಸಿ ಕರೆತಂದಿದೆ. ನಂತರ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದೆ.

ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹೆಚ್ ರಾಜು, ಡಿಎಫ್’ಓ ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಮಕ್ದು ಹುಸೇನ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಏನೀದು ಘಟನೆ? : ಲಭ್ಯ ಮಾಹಿತಿ ಅನುಸಾರ, ಹೊಳೆ ಬಸ್ ನಿಲ್ದಾಣದ ರೈಲ್ವೆ ಬ್ರಿಡ್ಜ್ ಬಳಿಯಿಂದ ಯುವತಿ ತುಂಗಾ ನದಿಗೆ ಹಾರಿದ್ದಾಳೆ. ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆಯಿರುವುದರಿಂದ, ಕೊಂಚ ದೂರ ತೇಲಿ ಹೋಗಿದ್ದಾಳೆ. ನಂತರ ನದಿ ನಡುವಿನ ಬಂಡೆಯೊಂದರ ಮೇಲೆ ಕುಳಿತುಕೊಂಡಿದ್ದಳು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಯುವತಿಯನ್ನು ರಕ್ಷಿಸಿದೆ. ಯುವತಿ ನದಿಗೆ ಹಾರಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shivamogga: A young woman jumped into the Tunga river and sat on a rock – Rescued by the fire brigade!

Shivamogga, September 10: A young woman who jumped into the Tunga river and sat on a rock in the middle of the water was rescued by a fire brigade team in Shivamogga city on the evening of September 10.

The 19-year-old woman, a resident of a residential area in Shivamogga city, jumped into the Tunga river. The fire brigade team, which went by boat, rescued the young woman and brought her back. Later, she was admitted to the Government Megan Hospital.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *