shimoga news | ಶಿವಮೊಗ್ಗ : ಹಾಡೋನಹಳ್ಳಿ ಗ್ರಾಮದ ಯುವಕ ನಾಪತ್ತೆ!

Shivamogga: Youth from Hadonahalli village goes missing! Shivamogga, October 9: An incident where a young man went missing after leaving home has occurred in Hadonahalli village Shivamogga taluk.

ಶಿವಮೊಗ್ಗ (shivamogga), ಅಕ್ಟೋಬರ್ 09: ಮನೆಯಿಂದ ಹೊರಹೋದ ಯುವಕನೋರ್ವ, ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಶುರಾಮ್ (32 ವರ್ಷ) ನಾಪತ್ತೆಯಾದವರೆಂದು ಗುರುತಿಸಲಾಗಿದೆ. ಸೆಪ್ಟೆಂಬರ್ 14 ರಂದು ಅತಿಯಾದ ಮದ್ಯಪಾನ ಮಾಡಿದ್ದ ಅವರು, ಮನೆಯಲ್ಲಿ ಮನಸ್ತಾಪ ಮಾಡಿಕೊಂಡು ಹೊರಗೆ ಹೋದವರು, ವಾಪಸ್ ಮನೆಗೆ ಆಗಮಿಸದೆ ಕಣ್ಮರೆಯಾಗಿದ್ದಾರೆ.

ಚಹರೆ : 5.10 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಚೆಕ್ಸ್ ಶರ್ಟ್, ಕಾಕಿ ಪ್ಯಾಂಟ್ ಧರಿಸಿರುತ್ತಾರೆ.

ಇವರ ಬಗ್ಗೆ ಸುಳಿವು ಲಭ್ಯವಾದರೆ ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261400/261418/ 9480803332/ 9480803350 ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga: Youth from Hadonahalli village goes missing! | Shivamogga, October 9: An incident where a young man went missing after leaving home has occurred in Hadonahalli village Shivamogga taluk.

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *