shimoga news | ಶಿವಮೊಗ್ಗ : ಬಸ್ ನಲ್ಲಿಯೇ ನಗದು, ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟ ಮಹಿಳೆ!

Shivamogga: Woman leaves behind bag containing cash and gold jewelry on a bus! | Shivamogga, October 7: Police from the Shivamogga Doddapete station recovered and returned a bag—containing cash - gold jewelry and a mobile phone—that a woman had inadvertently left behind on a private bus.

ಶಿವಮೊಗ್ಗ (shivamogga), ಅಕ್ಟೋಬರ್ 08: ಖಾಸಗಿ ಬಸ್ ನಲ್ಲಿ ಮಹಿಳೆಯೋರ್ವರು ಮರೆತು ಬಿಟ್ಟು ಬಂದಿದ್ದ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಪೋನ್ ಇದ್ದ ಬ್ಯಾಗ್ ನ್ನು, ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಪತ್ತೆ ಹಚ್ಚಿ ಮಹಿಳೆಗೆ ಹಿಂದಿರುಗಿಸಿದ ಘಟನೆ ನಡೆದಿದೆ.

ಏನೀದು ಘಟನೆ? : ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಲಸೂರು ಗೇಟ್ ಮೂಲದ ಮಹಿಳೆಯೋರ್ವರು ಅಕ್ಟೋಬರ್ 6 ರಂದು ಶಿವಮೊಗ್ಗದಿಂದ ತರೀಕೆರೆಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 60 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಇದ್ದ ಬ್ಯಾಗ್ ನ್ನು ಬಸ್ ನಲ್ಲಿಯೇ ಮರೆತು ಇಳಿದಿದ್ದರು.

ಬ್ಯಾಗ್ ನ್ನು ಬಸ್ ನಲ್ಲಿಯೇ ಬಿಟ್ಟಿರುವುದನ್ನು ಗಮನಕ್ಕೆ ಬರುತ್ತಿದ್ದಂತೆ ಮಹಿಳೆಯು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದರು.

ಹೆಡ್ ಕಾನ್ಸ್’ಟೇಬಲ್ ಮಂಜಪ್ಪ ಹಾಗೂ ಕಾನ್ಸ್’ಟೇಬಲ್ ಚಂದ್ರನಾಯ್ಕ್ ಅವರು ಖಾಸಗಿ ಬಸ್ ಮಾಹಿತಿ ಸಂಗ್ರಹಿಸಿ, ಅದರಲ್ಲಿದ್ದ ಬ್ಯಾಗ್ ನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದರು. ನಂತರ ಚಿನ್ನಾಭರಣ, ನಗದು, ಮೊಬೈಲ್ ಫೋನ್ ಇದ್ದ ಬ್ಯಾಗ್ ನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ.

Shivamogga: Woman leaves behind bag containing cash and gold jewelry on a bus! | Shivamogga, October 7: Police from the Shivamogga Doddapete station recovered and returned a bag—containing cash – gold jewelry and a mobile phone—that a woman had inadvertently left behind on a private bus.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *