ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 21: ಶಿವಮೊಗ್ಗ ತಾಲೂಕಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಹಾಗೂ ಪ್ರಸ್ತುತ ಕಂಡುಬರುತ್ತಿರುವ ಬಿರು ಬಿಸಿಲಿನಿಂದ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಸಂಪೂರ್ಣ ಇಳಿಕೆಯಾಗುತ್ತಿದೆ. ಮೂಕಪ್ರಾಣಿಗಳು ಕುಡಿಯುವ ನೀರಿಗೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ನಡುವೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತವು ಬೇಸಿಗೆ ವೇಳೆ ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆಗಾಗಿ, ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಜಾನುವಾರು ತೊಟ್ಟಿಗಳ ನಿರ್ಮಾಣ ಹಾಗೂ ಹಾಳಾದ ತೊಟ್ಟಿಗಳ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಅದರಂತೆ ಬಸವನಗಂಗೂರು ಗ್ರಾಮ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆಯಡಿ ಹೊಸದಾಗಿ ಜಾನುವಾರು ತೊಟ್ಟಿ ನಿರ್ಮಾಣ ಹಾಗೂ ಹಳೇಯ ತೊಟ್ಟಿಗಳ ದುರಸ್ತಿ ಕಾರ್ಯಕ್ಕೆ ಕ್ರಮಕೈಗೊಂಡಿದ್ದು, ನವೆಂಬರ್ 21 ರಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿಡಿಓ) ಹೆಚ್ ರಾಜಪ್ಪ ಅವರು ಸ್ಥಳ ಪರಿಶೀಲನೆ ನಡೆಸಿದರು.
‘ಕಾಲಮಿತಿಯೊಳಗೆ ಜಾನುವಾರು ತೊಟ್ಟಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಬೇಸಿಗೆ ವೇಳೆ ಮೂಕ ಪ್ರಾಣಿಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಈಗಾಗಲೇ ಇರುವ ಜಾನುವಾರು ತೊಟ್ಟಿಗಳನ್ನು ಸುವ್ಯವಸ್ಥಿತವಾಗಿಡುವ ಕೆಲಸ ಮಾಡಿ, ದಿನನಿತ್ಯ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಪಿಡಿಓ ಹೆಚ್ ರಾಜಪ್ಪ ಅವರು ತಿಳಿಸಿದ್ದಾರೆ.
ಸಿಎಂ ಕಚೇರಿಯ ಮಾನವೀಯ ಕಳಕಳಿಗೆ ಮೆಚ್ಚುಗೆ!
*** ಶಿವಮೊಗ್ಗದ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಗೃಹ ಮಂಡಳಿ ಬಡಾವಣೆಯ ಉದ್ಯಾನವನದ ಬಳಿಯಿರುವ ಜಾನುವಾರು ತೊಟ್ಟಿ ಹಾಳಾಗಿ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ಕುರಿತಂತೆ, ಪತ್ರಕರ್ತ ಬಿ ರೇಣುಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಗೆ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿಯ ಕುಂದುಕೊರತೆ ವಿಭಾಗವು ತ್ವರಿತಗತಿಯಲ್ಲಿ ಸ್ಪಂದಿಸಿದೆ. ಪೋಸ್ಟ್ ಗಮನಿಸಿ ಶಿವಮೊಗ್ಗ ತಾಲೂಕು ಆಡಳಿತದ ಗಮನಕ್ಕೆ ತಂದಿತ್ತು. ಇದರ ಬೆನ್ನಲ್ಲೇ ಜಾನುವಾರು ತೊಟ್ಟಿಯ ದುರಸ್ತಿ ಕಾರ್ಯ ನಡೆಸಿ, ನೀರು ಪೂರೈಕೆಗೆ ಕ್ರಮಕೈಗೊಂಡು ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಲಾಗಿದೆ. ಸಿಎಂ ಕಚೇರಿ ಕುಂದುಕೊರತೆ ವಿಭಾಗದ ದಕ್ಷ ಅಧಿಕಾರಿಯಾದ ಕೆ ವೈಷ್ಣವಿ ಮತ್ತವರ ಸಿಬ್ಬಂದಿಗಳಾದ ಲಕ್ಷ್ಮಣ್ ಮತ್ತಿತರ ತ್ವರಿತ ಸ್ಪಂದನೆಗೆ ಸುತ್ತಮುತ್ತಲಿನ ಗ್ರಾಮಗಳ ಜಾನುವಾರು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮರೋಪಾದಿಯಲ್ಲಿ ಕಾರ್ಯನಿರ್ವಹಣೆ : ಆಡಳಿತಾಧಿಕಾರಿ ಸಂತೋಷ್ ಕುಮಾರ್

*** ‘ಮುಂಗಾರು ಮಳೆ ಕೊರತೆಯಿಂದ ಬರಗಾಲ ಸ್ಥಿತಿ ಎದುರಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಜನ – ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಅಗತ್ಯವಿರುವೆಡೆ ಹೊಸದಾಗಿ ಜಾನುವಾರು ತೊಟ್ಟಿಗಳ ನಿರ್ಮಾಣ ಸೇರಿದಂತೆ ತೊಟ್ಟಿಗಳಿಗೆ ನಿಯಮಿತವಾಗಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗಳೂ ಆದ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಗಳಾದ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಜಾನುವಾರುಗಳ ದಾಹ ಇಂಗಿಸುವ ಕಾರ್ಯ : ಪಿಡಿಓ ಹೆಚ್ ರಾಜಪ್ಪ

‘ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಗತ್ಯವಿರುವೆಡೆ ಕಾಲಮಿತಿಯೊಳಗೆ ಜಾನುವಾರು ತೊಟ್ಟಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಬೇಸಿಗೆ ವೇಳೆ ಮೂಕ ಪ್ರಾಣಿಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಈಗಾಗಲೇ ಇರುವ ಜಾನುವಾರು ತೊಟ್ಟಿಗಳನ್ನು ಸುವ್ಯವಸ್ಥಿತವಾಗಿಡುವ ಕೆಲಸ ಮಾಡಿ, ದಿನನಿತ್ಯ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಪಿಡಿಓ ಹೆಚ್ ರಾಜಪ್ಪ ಅವರು ತಿಳಿಸಿದ್ದಾರೆ.
Severe Drought in Shivamogga Taluk: Abbalagere Gram Panchayat Takes Initiative to Quench the Thirst of Livestock! | Shivamogga, November 21: Due to a severe deficit in monsoon rainfall and the current intense heat, water levels in local lakes and ponds across Shivamogga Taluk are plummeting. This has created a dire situation where animals are struggling to find drinking water. In response, the Abbalagere Gram Panchayat administration has launched an initiative to ensure the availability of drinking water for livestock during the summer. This includes the construction of new watering troughs and the repair of existing, damaged ones across the Gram Panchayat’s jurisdiction.

