shimoga news | ಶಿವಮೊಗ್ಗ : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಿಗೂಢ ಕಣ್ಮರೆ!

Shivamogga: Young woman working at a private company goes missing under mysterious circumstances! | Shivamogga, November 21: An incident has occurred in Shivamogga city where a young woman, who was employed at a private company, has gone missing under mysterious circumstances.

ಶಿವಮೊಗ್ಗ (shivamogga), ನವೆಂಬರ್ 21: ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ದೀಕ್ಷಿತಾ (23) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಯುವತಿಯು ಹೊಸಮನೆ 3 ನೇ ಕ್ರಾಸ್ ನ ಅಜ್ಜಿ ಮನೆಯಲ್ಲಿ ವಾಸವಿದ್ದು, ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ನವೆಂಬರ್ 18 ರಂದು ಮನೆಯಿಂದ ಹೊರಹೋದ ಯುವತಿಯು ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ನವೆಂಬರ್ 21 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಚಹರೆ : ಯುವತಿಯು 4.10 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಕಾಣೆಯಾದ ವೇಳೆ ಕಪ್ಪು ಬಣ್ಣದ ಚೂಡಿದಾರ, ಬಿಳಿ ಜಾಕೇಟ್ ಧರಿಸಿರುತ್ತಾರೆ.

ಈ ಯುವತಿಯ ಬಗ್ಗೆ ಸುಳಿವು ಲಭ್ಯವಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261414, 9480803345, 6360185433 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga: Young woman working at a private company goes missing under mysterious circumstances! | Shivamogga, November 21: An incident has occurred in Shivamogga city where a young woman, who was employed at a private company, has gone missing under mysterious circumstances.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *