shikaripura accident news | ಶಿಕಾರಿಪುರ ಭೀಕರ ಅಪಘಾತ ಪ್ರಕರಣ : ನಾಲ್ವರ ದುರ್ಮರಣ!

Tragic Accident in Shikaripura: Four Dead! | Shikaripura, October 24: A head-on collision between a car and a lorry occurred on the evening of October 23 on a state highway near Mattighatta Camp in the Shikaripura taluk of Shivamogga district. Four occupants of the car died and one person sustained serious injuries.

ಶಿಕಾರಿಪುರ (shikaripura), ಅಕ್ಟೋಬರ್ 24: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು, ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಅಕ್ಟೋಬರ್ 23 ರ ಸಂಜೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಮುತ್ತಿಗ ಗ್ರಾಮದ ನಿವಾಸಿಗಳಾದ ಉಜ್ಜಪ್ಪ (65), ಇವರ ಪತ್ನಿ ಲಲಿತಮ್ಮ (60), ಇವರ ಸಂಬಂಧಿ ಜಯಮ್ಮ (58) ಹಾಗೂ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ನಿವಾಸಿಯಾದ ಕಾರು ಚಾಲಕ ಗುರುಬಸಪ್ಪ (35) ಮೃತಪಟ್ಟವರೆಂದು ಗುರುತಿಸಲಾಗಿದೆ.

ಅವಘಡದಲ್ಲಿ ಹನುಮಂತಪ್ಪ (65) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೇಗಾಯ್ತು? : ಉಜ್ಜಪ್ಪ ಅವರು ಕಳೆದ ತಿಂಗಳು ಅಪಘಾತದಲ್ಲಿ ಗಾಯಗೊಂಡಿದ್ದರು. ಅವರಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬಾಡಿಗೆ ಕಾರಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಊರಿಗೆ ಹಿಂದಿರುಗುವಾಗ ಶಿಕಾರಿಪುರದ ಕಡೆಯಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ಅಡಕೆ ಸಾಗಾಣೆ ಲಾರಿ ಡಿಕ್ಕಿಯಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ, ಡಿವೈಎಸ್ಪಿ ಕೇಶವ್, ಸಬ್ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tragic Accident in Shikaripura: Four Dead! | Shikaripura, October 24: A head-on collision between a car and a lorry occurred on the evening of October 23 on a state highway near Mattighatta Camp in the Shikaripura taluk of Shivamogga district. Four occupants of the car died and one person sustained serious injuries.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *