
shikaripura | ಶಿಕಾರಿಪುರ : ಮನೆಯಲ್ಲಿ ಕಳವು ನಡೆಸಿದ್ದ ಆರೋಪಿ ಸೆರೆ – ಚಿನ್ನಾಭರಣ ವಶ!
ಶಿಕಾರಿಪುರ (shikaripur), ಜ. 5: ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕು ಚುರ್ಚುಗುಂಡಿ ಗ್ರಾಮ ಸಾಲೂರು ಬೀದಿ ನಿವಾಸಿ ನಿವಾಸಿ ಶಿವರಾಜ್ ಪಿ ಎಸ್ ಯಾನೆ ಶಿವು (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. 3-1-2025 ರಂದು ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 6,30,000 ರೂ. ಮೌಲ್ಯದ 90.4 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 6,000 ರೂ. ಮೌಲ್ಯದ 60 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗು ಕೃತ್ಯಕ್ಕೆ ಬಳಸಿದ 80,000 ರೂ. ಮೌಲ್ಯದ ಹಿರೋ ಹೆಚ್.ಎಫ್.ಡಿಲೆಕ್ಸ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಒಟ್ಟಾರೆ ಅಂದಾಜು 7,16,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಜ. 4 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶೋಭಾರಾಣಿ, ಅಕ್ಬರ್ ಮುಲ್ಲಾ, ಸಿಬ್ಬಂದಿಗಳಾದ ಹೆಚ್.ಸಿ. ಗಳಾದ ನಾಗರಾಜ್, ರಾಘವೇಂದ್ರ, ಪಿಸಿಗಳಾದ ಪ್ರಶಾಂತ್, ಹಜರತ್ ಅಲಿ, ಜಾಫರ್, ಶೇಖರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಳವು : 25-12-2024 ರಂದು ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗಾಮ ಎಂಬ ಹಳ್ಳಿಯ ಮಹಿಳೆಯೋರ್ವರ ಮನೆಯಲ್ಲಿ ಕಳವು ನಡೆದಿತ್ತು. ಮನೆಯ ಮೇಲ್ಛಾವಣಿ ಮೂಲಕ ಒಳಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
Shikaripura January 5: The Shikaripura rural station police arrested the accused who had committed theft in a house and seized gold jewelery worth lakhs of rupees.
Under the supervision of DySP Keshav KE, under the leadership of Inspector RR Patil, Sub-Inspector Shobharani, Akbar Mulla, staff H.C. Nagaraj, Raghavendra, PCs Prashant, Hazrat Ali, Zafar, Shekhar were successful in arresting the accused.