shimoga news | ಶಿವಮೊಗ್ಗ : ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಿಗೆ ಕುವೆಂಪು ನಗರ ನಿವಾಸಿಗಳ ಆಗ್ರಹವೇನು?

Shivamogga: What are the demands of Kuvempu Nagar residents to the Urban Development Authority Chairman? | Shivamogga, October 21: On October 21 residents of Kuvempu Nagar submitted a memorandum to C. G. Madhusudan Chairman of the Shivamogga-Bhadravathi Urban Development Authority urging him to take action to resolve various infrastructure-related issues, including the installation of signage.

ಶಿವಮೊಗ್ಗ (shivanogga), ಅಕ್ಟೋಬರ್ 21: ನಾಮಫಲಕ ಅಳವಡಿಕೆ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ, ಅಕ್ಟೋಬರ್ 21 ರಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ ಜಿ ಮಧುಸೂದನ್ ಅವರಿಗೆ ಕುವೆಂಪು ನಗರ ನಿವಾಸಿಗಳು ಮನವಿ ಪತ್ರ ಅರ್ಪಿಸಿದ್ದಾರೆ.

ಕುವೆಂಪು ನಗರ ಬಡಾವಣೆಯು ಎ,ಬಿ,ಸಿ,ಡಿ ಬ್ಲಾಕ್ ಗಳನ್ನೊಳಗೊಂಡಿದೆ. ಆದರೆ ಬಡಾವಣೆಯಲ್ಲಿ ಇಲ್ಲಿಯವರೆಗೂ ಸೂಕ್ತ ನಾಮಫಲಕ ಹಾಗೂ ಮಾರ್ಗಸೂಚಿ ಫಲಕಗಳಿಲ್ಲ. ಮತ್ತೊಂದೆಡೆ, ಬಡಾವಣೆ ಸುತ್ತಮುತ್ತಲಿರುವ ಖಾಸಗಿ ಬಡಾವಣೆಗಳು ಕುವೆಂಪು ನಗರ ಎಂದು ನಾಮಫಲಕ ಹಾಕಿಕೊಳ್ಳುತ್ತಿವೆ.

ಇದರಿಂದ ಮೂಲ ಬಡಾವಣೆಯೇ ಮರೆಯಾಗುವಂತಾಗಿದೆ. ಈ ಕಾರಣದಿಂದ ಕುವೆಂಪು ನಗರ ಬಳಿ ಸ್ವಾಗತ ಕಮಾನಿನ ನಾಮಫಲಕ ಹಾಗೂ ಅಡ್ಡ ರಸ್ತೆಗಳಲ್ಲಿ ಮಾಹಿತಿ ಫಲಕ ಅಳವಡಿಸಬೇಕು.

ಬಡಾವಣೆಯ ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳ ವ್ಯವಸ್ಥೆ ಮಾಡಬೇಕು. ಪಾರ್ಕ್ ಗಳನ್ನು ಅಭಿವೃದ್ದಿಗೊಳಿಸಿ, ವ್ಯಾಯಾಮ ಹಾಗೂ ಆಟದ ಉಪಕರಣ ಅಳವಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ನಿವಾಸಿಗಳಾದ ಕಿರಣ್ ಕುಮಾರ್, ಚಿದಾನಂದಪ್ಪ, ನಮ್ರತ್, ಶಿವ ಪ್ರಕಾಶ್, ಬಸವರಾಜಪ್ಪ, ಲಿಂಗಪ್ಪ, ಅಶೋಕ್, ಮಾದೇವಪ್ಪ ಮೊದಲಾದವರಿದ್ದರು.

Shivamogga: What are the demands of Kuvempu Nagar residents to the Urban Development Authority Chairman? | Shivamogga, October 21: On October 21 residents of Kuvempu Nagar submitted a memorandum to C. G. Madhusudan Chairman of the Shivamogga-Bhadravathi Urban Development Authority urging him to take action to resolve various infrastructure-related issues, including the installation of signage.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *