ಶಿವಮೊಗ್ಗ (shivamogga), ನವೆಂಬರ್ 06: ವಿದ್ಯುತ್ ಸ್ಪರ್ಶದಿಂದ ಗಂಡು ಕಾಡಾನೆಯೊಂದು ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಶಂಕರ ಅರಣ್ಯ ವಲಯದ ಈಚವಾಡಿ ಗ್ರಾಮದಲ್ಲಿ ನಡೆದಿದ್ದು, ನವೆಂಬರ್ 07 ರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ.
ಮೃತ ಕಾಡಾನೆಯು ಸರಿಸುಮಾರು 10 ರಿಂದ 12 ವರ್ಷದ್ದಾಗಿದೆ. ಭತ್ತದ ಗದ್ದೆಯ ಬದುವಿನಲ್ಲಿ ತಂತಿ ಬೇಲಿ ಅಳವಡಿಸಲಾಗಿದ್ದು, ಸಮೀಪದಲ್ಲಿಯೇ ವಿದ್ಯುತ್ ಕಂಬವಿದೆ. ಈ ಸ್ಥಳಕ್ಕೆ ಆಗಮಿಸಿದ ಕಾಡಾನೆಯು, ವಿದ್ಯುತ್ ಶಾಕ್ ನಿಂದ ಮೃತಪಡುವಂತಾಗಿದೆ ಎಂದು ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಲಿಮಿಯಾ ಬಿನ್ ಪೀರ್ ಸಮೀಯಾ ಎಂಬಾತನನ್ನು ಬಂಧಿಸಲಾಗಿದೆ. ಭತ್ತವು ತೆನೆ ಬಿಡುವ ಹಂತದಲ್ಲಿದ್ದು, ಹಂದಿಗಳ ಹಾವಳಿ ವಿಪರೀತವಾಗಿತ್ತು. ಇವುಗಳ ನಿಯಂತ್ರಣಕ್ಕಾಗಿ ಗದ್ದೆಯ ಬದುವಿನಲ್ಲಿ ಬಳಿ ತಂತಿ ಅಳವಡಿಸಿ, ಅದಕ್ಕೆ ವಿದ್ಯುತ್ ಸಂಪರ್ಕ್ ಕಲ್ಪಿಸಲಾಗಿತ್ತು ಎಂದು ಆರೋಪಿ ತಿಳಿಸಿದ್ದಾನೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಅಪಾದಿತನ ವಿರುದ್ದ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು, ಮೆಸ್ಕಾಂಗೆ ದೂರು ನೀಡಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಕೆ ಟಿ ಹನುಮಂತಪ್ಪ, ಅಜ್ಜಯ್ಯ, ರಾಘವೇಂದ್ರರಾವ್, ಬಾಬು ರಾಜೇಂದ್ರ ಪ್ರಸಾದ್, ವಿಜಯಕುಮಾರ್ ಸೇರಿದಂತೆ ಮೊದಲಾದವರು ಭೇಟಿಯಿತ್ತು ಪರಿಶೀಲಿಸಿದರು.
Shivamogga: Wild Elephant Dies of Electric Shock in Paddy Field – Accused Arrested! | Shivamogga, November 06: A male wild elephant has died due to an electric shock in Ichavadi village, located within the Shankara Forest Range of Shivamogga taluk. The incident came to light on the morning of November 07.

