ಶಿವಮೊಗ್ಗ (shivamogga), ನವೆಂಬರ್ 08: ಬಾಲಕಿ ಮೇಲೆ ದೌರ್ಜನ್ಯ ಎಸಗಿದಾತ ಹಾಗೂ ಇದಕ್ಕೆ ಸಹಕಾರ ನೀಡಿದ ಆತನ ಇಬ್ಬರು ಸ್ನೇಹಿತರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯ ಎಸಗಿದ 28 ವರ್ಷದ ಯುವಕ, ಬಾಲಕಿಯನ್ನು ಕರೆದೊಯ್ಯಲು ಕಾರು ನೀಡಿದ 33 ವರ್ಷದ ಯುವಕ ಹಾಗೂ ತನ್ನ ಜಾಗದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ 28 ವರ್ಷದ ಯುವಕನೇ ಜೈಲು ಶಿಕ್ಷೆಗೆ ಗುರಿಯಾದವರಾಗಿದ್ದಾರೆ. (ಪೋಕ್ಸೋ ಕಾಯ್ದೆಯಡಿ ಗುರುತು ಬಹಿರಂಗಪಡಿಸುವಂತಿಲ್ಲ)
ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ 3.29 ಲಕ್ಷ ರೂ, ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ 3 ಲಕ್ಷ ರೂ. ಹಾಗೂ ಸರ್ಕಾರದವತಿಯಿಂದ 4 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಪ್ರಕರಣದ ಮೊದಲ ಆರೋಪಿಯಾಗಿದ್ದ 28 ವರ್ಷದ ಯುವಕನು, 17 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಮನೆಯಿಂದ ಕರೆದೊಯ್ದಿದ್ದನು. ಬಾಲಕಿಯನ್ನು ಕರೆದೊಯ್ಯಲು ಪ್ರಕರಣದ 2 ನೇ ಆರೋಪಿಯಾಗಿದ್ದ 33 ವರ್ಷದ ವ್ಯಕ್ತಿಯು ಕಾರು ನೀಡಿದ್ದನು. ಪ್ರಕರಣದ 3 ನೇ ಆರೋಪಿಯಾಗಿದ್ದ 28 ವರ್ಷದ ವ್ಯಕ್ತಿಯು ತನ್ನ ಜಾಗದಲ್ಲಿ ಮೊದಲ ಆರೋಪಿ ಹಾಗೂ ಬಾಲಕಿ ಉಳಿದುಕೊಳ್ಳಲು ಅವಕಾಶ ನೀಡಿದ್ದ.
ಸದರಿ ಸ್ಥಳದಲ್ಲಿ ಮೊದಲ ಆರೋಪಿಯು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ರುದ್ರೇಶ್ ಕೆ ಪಿ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Shivamogga: 20 Years of Rigorous Imprisonment for Three Men! | Shivamogga, November 08: The District and Sessions Court (FTSC-1) in Shivamogga has sentenced a man who committed an atrocity against a minor girl, along with two of his friends who assisted him, to 20 years of rigorous imprisonment. Those sentenced include a 28-year-old man who committed the sexual assault, a 33-year-old man who provided a car to transport the girl, and another 28-year-old man who allowed them to stay on his premises. (Under the POCSO Act, identities cannot be disclosed.)

