shimoga news | ಶಿವಮೊಗ್ಗ : ಆಟೋದಲ್ಲಿ ಆಗಮಿಸಿ ಹಾಡಹಗಲೇ ಕಬ್ಬಿಣದ ವಸ್ತು ಕಳವು!

Shivamogga : Iron items stolen in broad daylight by a person arriving in an auto-rickshaw! | Shivamogga, November 18: An incident occurred in Bright City Layout on the morning of November 18, where a person arriving in an auto-rickshaw stole iron items—worth thousands of rupees—that were kept in a shed next to a house.

ಶಿವಮೊಗ್ಗ, ನವೆಂಬರ್ 18: ಮನೆಯೊಂದರ ಪಕ್ಕದ ಶೆಡ್ ನಲ್ಲಿರಿಸಿದ್ದ ಸಾವಿರಾರು ರೂ. ಮೌಲ್ಯದ ಕಬ್ಬಿಣದ ವಸ್ತುಗಳನ್ನು, ಆಟೋದಲ್ಲಿ ಆಗಮಿಸಿದ ವ್ಯಕ್ತಿಯೋರ್ವ ಕಳವು ಮಾಡಿ ಕೊಂಡೊಯ್ದ ಘಟನೆ ಬ್ರೈಟ್ ಸಿಟಿ ಲೇಔಟ್ ನಲ್ಲಿ ನವೆಂಬರ್ 18 ರ ಬೆಳಿಗ್ಗೆ ನಡೆದಿದೆ.

ಗುತ್ತಿಗೆದಾರ ಅಕ್ಷಯ್ ಕುಮಾರ್ ಎಂಬುವರ ಮನೆಯ ಸಮೀಪ ಘಟನೆ ನಡೆದಿದೆ. ಸರಿಸುಮಾರು 25 ಸಾವಿರ ರೂ. ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಅಕ್ಷಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

‘ತಮ್ಮ ಮನೆ ಪಕ್ಕದಲ್ಲಿ ಶೆಡ್ ಇದ್ದು ಇದರಲ್ಲಿ ಹೆದ್ದಾರಿಗಳಿಗೆ ಹಾಕುವ ಬ್ಯಾರಿಕೇಡ್, ಸಿಗ್ನಲ್ ಬೋರ್ಡ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ವಸ್ತುಗಳಿವೆ. ಬೆಳಿಗ್ಗೆ 11.49 ರ ವೇಳೆಗೆ ಆಟೋದಲ್ಲಿ ಆಗಮಿಸಿದ ವ್ಯಕ್ತಿಯೋರ್ವ ಸದರಿ ವಸ್ತುಗಳನ್ನು ಆಟೋದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಸದರಿ ದೃಶ್ಯ ತಮ್ಮ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ’ ಎಂದು ಅಕ್ಷಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

‘ಹಗಲು ವೇಳೆಯೇ ರಾಜಾರೋಷವಾಗಿ ಕಳವು ಕೃತ್ಯ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೃತ್ಯದ ಸಿಸಿ ಕ್ಯಾಮರಾದ ದೃಶ್ಯಾವಳಿ ಸಂಗ್ರಹಿಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು’ ಎಂದು ಅಕ್ಷಯ್ ಕುಮಾರ್ ಅವರು ತಿಳಿಸಿದ್ದಾರೆ.

Shivamogga : Iron items stolen in broad daylight by a person arriving in an auto-rickshaw! | Shivamogga, November 18: An incident occurred in Bright City Layout on the morning of November 18, where a person arriving in an auto-rickshaw stole iron items—worth thousands of rupees—that were kept in a shed next to a house.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *