bhadravati news update | ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ಪಂಪ್ ಸೆಟ್ ಕಳವು ಮಾಡಿದ್ದ ಆರೋಪಿ ಅರೆಸ್ಟ್!

Accused arrested for stealing a pump set in Bhadravathi’s Rubber Kadu village! | Bhadravathi, November 24: The Bhadravathi Paper Town police have arrested an individual on charges of stealing a pump set motor.

ಭದ್ರಾವತಿ (bhadravati), ನವೆಂಬರ್ 24: ಪಂಪ್ ಸೆಟ್ ಮೋಟಾರ್ ಕಳವು ಮಾಡಿದ್ದ ಆರೋಪದ ಮೇರೆಗೆ ಓರ್ವನನ್ನು ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಚಂದ್ರ (40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 30 ಸಾವಿರ ರೂ. ಮೌಲ್ಯದ ಎರಡು ಪಂಪ್ ಸೆಟ್ ಮೋಟಾರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಬ್ಬರ್ ಕಾಡು ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೋಟಾರ್ ಪಂಪ್ ಸೆಟ್ ಗಳನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಇನ್ಸ್’ಪೆಕ್ಟರ್ ಶರಣಪ್ಪ, ಸಬ್ ಇನ್ಸ್’ಪೆಕ್ಟರ್ ಕುಮಾರ್ ಎನ್, ಸಿಹೆಚ್’ಸಿ ನಾಗರಾಜ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಪೊಲೀಸ್ ಇಲಾಖೆಯು ನವೆಂಬರ್ 24 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

Accused arrested for stealing a pump set in Bhadravathi’s Rubber Kadu village! | Bhadravathi, November 24: The Bhadravathi Paper Town police have arrested an individual on charges of stealing a pump set motor.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *