shimoga palike news | ಶಿವಮೊಗ್ಗ ನಗರದ ವಿವಿಧೆಡೆ ಪೊಲೀಸ್ ಭದ್ರತೆಯಲ್ಲಿ ಹಂದಿಗಳ ಸೆರೆ ಕಾರ್ಯಾಚರಣೆ!

Operation to Capture Pigs Underway in Various Parts of Shivamogga City Amidst Police Security! Shivamogga, November 26: The City Corporation administration has launched an operation to capture pigs across various locations in Shivamogga city, beginning on the morning of November 26, with police security provided.

ಶಿವಮೊಗ್ಗ (shivamogga), ನವೆಂಬರ್ 26: ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 26 ರ ಬೆಳಿಗ್ಗೆಯಿಂದ, ಪೊಲೀಸ್ ಭದ್ರತೆಯಲ್ಲಿ ಹಂದಿಗಳ ಸೆರೆ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಆಡಳಿತ ಆರಂಭಿಸಿದೆ.

ಹಂದಿಗಳನ್ನು ಹಿಡಿಯಲು ತಮಿಳುನಾಡಿನಿಂದ ವಿಶೇಷ ತಂಡವನ್ನು ಕರೆಯಿಸಿಕೊಳ್ಳಲಾಗಿದೆ. ಸುಮಾರು 10 ಕ್ಕೂ ಅಧಿಕ ಜನರಿರುವ ಸದರಿ ತಂಡವು, ಬೆಳಿಗ್ಗೆಯಿಂದಲೇ ಹಂದಿಗಳ ಸೆರೆ ಕಾರ್ಯಾಚರಣೆ ಆರಂಭಿಸಿದೆ.

ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಅವರ ಸೂಚನೆ ಮೇರೆಗೆ ಆರೋಗ್ಯ – ಪರಿಸರ ವಿಭಾಗವು ಹಂದಿಗಳ ಸೆರೆ ಕಾರ್ಯಾಚರಣೆ ನಡೆಸುತ್ತಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಪ್ರಭಾಕರ್ ಅವರು ಕಾರ್ಯಾಚರಣೆ ನೇತೃತ್ವವಹಿಸಿದ್ದಾರೆ.

ಹೆಲ್ತ್ ಇನ್ಸ್’ಪೆಕ್ಟರ್ ಗಳಾದ ಲೋಹಿತ್, ವಿಕಾಸ್, ವಸಂತ್, ಸುರೇಶ್, ಪ್ರಭುರಾಜ್, ಲಕ್ಕಣ್ಣ ಸೇರಿದಂತೆ ಪರಿಸರ – ಆರೋಗ್ಯ ವಿಭಾಗದ ಎಲ್ಲ ಅಧಿಕಾರಿ – ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಬೆಳಿಗ್ಗೆ ಸೂಳೇಬೈಲು, ಗಂಧರ್ವ ನಗರ, ಚಾಲುಕ್ಯ ನಗರ, ಆರ್’ಎಂಎಲ್ ನಗರ, ಅಶೋಕನಗರ, ಪೊಲೀಸ್ ಕ್ವಾಟರ್ಸ್, ಇಲಿಯಾಜ್ ನಗರ, ಮಂಡ್ಲ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಂಜೆಯವರೆಗೂ ಹಂದಿಗಳ ಸೆರೆ ಹಿಡಿಯುವ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

ಪಾಲಿಕೆ ಆರೋಗ್ಯ ವಿಭಾಗದ ಎಇಇ ಪ್ರಭಾಕರ್ ಹೇಳಿದ್ದೇನು?

*** ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಹಂದಿಗಳ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ತಮಿಳುನಾಡಿನಿಂದ ಹಂದಿಗಳನ್ನು ಸೆರೆ ಹಿಡಿಯುವವರನ್ನು ಕರೆಯಿಸಲಾಗಿದೆ. ಹಂದಿಗಳ ಸಾಕಾಣಿಕೆ ಮಾಡುವವರು ಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳನ್ನು ಬಿಡಬಾರದು. ಕೂಡಲೇ ಸ್ಥಳಾಂತರಗೊಳಿಸಬೇಕು. ಇಲ್ಲದಿದ್ದರೆ ಪಾಲಿಕೆಯಿಂದಲೆ ಸ್ಥಳಾಂತರ ಕಾರ್ಯ ಮಾಡಲಾಗುವುದು’ ಎಂದು ಪಾಲಿಕೆ ಆರೋಗ್ಯ – ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಪ್ರಭಾಕರ್ ಅವರು ಸ್ಪಷ್ಟಪಡಿಸಿದ್ದಾರೆ.

Operation to Capture Pigs Underway in Various Parts of Shivamogga City Amidst Police Security!

Shivamogga, November 26: The City Corporation administration has launched an operation to capture pigs across various locations in Shivamogga city, beginning on the morning of November 26, with police security provided.

A specialized team has been brought in from Tamil Nadu to carry out the capture. The team, consisting of over 10 members, commenced the operation early this morning.

The operation is being conducted by the Health and Environment Department under the instructions of City Corporation Commissioner Mayannagowda. Assistant Executive Engineer (AEE) Prabhakar is leading the effort.

All officials and staff from the Health and Environment Department—including Health Inspectors Lohith, Vikas, Vasanth, Suresh, Prabhuraj, and Lakkanna—are participating in the operation.

Earlier today, the operation was carried out in several localities, including Sulebailu, Gandharva Nagar, Chalukya Nagar, RML Nagar, Ashoka Nagar, the Police Quarters, Iliyaz Nagar, and Mandla. Corporation sources have indicated that the capture operation will continue until the evening.

What did AEE Prabhakar of the Corporation’s Health Department say?

*** “A similar operation to capture pigs within the Shivamogga City Corporation limits was previously conducted a few months ago.” “Operations have now resumed, and individuals skilled in capturing pigs have been brought in from Tamil Nadu. Those who rear pigs must not allow them to roam within the municipal limits; they must be relocated immediately. If this is not done, the Municipal Corporation itself will carry out the relocation,” clarified Prabhakar, Assistant Executive Engineer (AEE) of the Corporation’s Health and Environment Department.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *