ದೇಶ ಮುಂದುವರೆಯಲು ಹೂಡಿಕೆ ಹೆಚ್ಚಾಗಬೇಕು : ಕುವೆಂಪು ವಿವಿ ಕುಲಪತಿ ಬಿ.ಪಿ.ವೀರಭದ್ರಪ್ಪ 

ಶಿವಮೊಗ್ಗ, ಫೆ. 4: ಉದ್ಯೋಗ ಪ್ರಪಂಚದ ಅಭಿವೃದ್ಧಿಗೆ  ಸಾಕಷ್ಟು ಉತ್ತೇಜನ ನೀಡುತ್ತದೆ. ಯಾವ ದೇಶ ಹಾಗೂ ಅಲ್ಲಿನ ಸಮಾಜ ಮುಂದುವರಿಯಬೇಕೊ ಆ ದೇಶದಲ್ಲಿ  ಹೂಡಿಕೆ ಹೆಚ್ಚಾಗಬೇಕು‌ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವಿರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯ ಹಾಗೂ ಕನೆಕ್ಟಿಂಗ್ ಎಜುಕೇಷನ್ ಆಂಡ್ ಎಂಟರ್ಪ್ರೈಸಸ್  ಸಹಯೋಗದೊಂದಿಗೆ ಶನಿವಾರ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಬ್ ಫೆರ್ ೩೦೩೧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವು,  ನಿರ್ಗತಿಕ ಹಾಗೂ ದಾರಿದ್ರ್ಯ ತೊಲಗಿ ಇವೆರೆಲ್ಲರ ನಾನು  ಬೆಳವಣಿಗೆ ನೋಡಬೇಕು. ಆ ಯಶಸ್ವಿಯ ಭಾಗವಹಿಸಿಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಅದರಂತೆಯೇ ಈಗ ಮೋದಿ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಿ ಕೆಲಸ ನೀಡಬೇಕೆಂದು ಹೇಳುವ ಮೂಲಕ ದೇಶದಲ್ಲಿ ನಿರುದ್ಯೋಗ ತೊಡೆದು ಹಾಕುವಲ್ಲಿ ಮುಂದಾಗಿದ್ದಾರೆ ಎಂದರು.

ಗಾಂಧಿ ಕಂಡ ಕನಸನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದ್ಯೋಗ ‌ಆಕಾಂಕ್ಷಿಗಳು ಸಾರ್ವಜನಿಕರು ಸೇವೆಯನ್ನು ಅರಸಿ ಈಗಾಗಲೇ  ಸಾಕಷ್ಟು ಸಮಯ ಹಾಳು‌ ಮಾಡಿಕೊಂಡಿದ್ದಾರೆ. ಅವರ ಬದುಕನ್ನು ಮತ್ತೇ ಉತ್ತೇಜಿಸಲು ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ  ಕುವೆಂಪು ವಿವಿ ಆಶಾ ಕಿರಣವಾಗಿದೆ ಎಂದರು .

ಇತ್ತೀಚೆಗೆ ಯುವ ಜನತೆ ಗೋಡೆಗಳು ಮಧ್ಯಯೇ ಬೆಳೆದು  ವಿಶ್ವವನ್ನು ಅರ್ಥ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಆಚೆ  ಬಂದಾಗ ಮಾತ್ರ ಈ ಜಗತ್ತು ಏನೆಂದು ಅರ್ಥ ಆಗುತ್ತದೆ. ವಿದ್ಯಾರ್ಥಿ ಗಳು ಜಗದಗಲ ಮುಗಿದಗಲ ಬೆಳೆಯಬೇಕು. ಇದಕ್ಕೆ ನಮ್ಮ ವಿವಿ ಸದಾ ಸಹಕಾರ ನೀಡುತ್ತಿದೆ‌. ಕೋವಿಡ್ ನಿಂದ ಕಳೆದುಕೊಂಡ ಅವಕಾಶವು ಈಗ ಉದ್ಯೋಗ ಮೇಳ‌ ಮುಖಾಂತರ ನಿಮ್ಮ‌ಮುಂದೆ ಇದೆ. ಈ ಅವಕಾಶವನ್ನು ಬೆಳೆಸಿಕೊಳ್ಳಬೇಕು ಎಂದರು.

ಇಲ್ಲಿ ಎಲ್ಲರೂ ಉದ್ಯೋಗಾಕಾಂಕ್ಷಿಗಳೇ ಆದರೆ ಅದನ್ನು ಪಡೆಯುವ ಶ್ರಮ ಯವಹಿಸಬೇಕು. ಜಗತ್ತಿನಾದ್ಯಂತ ಸಾಕಷ್ಟು ಕಂಪನಿಗಳಿವೆ. ಅದನ್ನು ಪಡೆಯುವಲ್ಲಿ ಕೌಶಲ್ಯವನ್ನೂ ಕರಗತ ಮಾಡಿಕೊಳ್ಳಬೇಕು. ಈಗಾಗಲೇ ಉದ್ಯೋಗ ಮೇಳದಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು,  ೪೦೦೦ ವಿದ್ಯಾರ್ಥಿ ಗಳು ನೊಂದಾಣಿಯಾಗಿದ್ದಾರೆ. ಉದ್ಯೋಗ ಮೇಳ ಇಷ್ಟಕ್ಕೆ ‌ಮಾತ್ರ ಸಿಮೀತವಾಗದೆ ಮುಂದಿನ ದಿನಗಳು 100 ಕಂಪನಿಗಳು ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿ ಗಳು ಯಾವುದಕ್ಕೂ ಸಿಮೀತವಾಗದೆ ಕೃಷಿ, ಕೈಗಾರಿಕಾ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡ್ಬೇಕು. ಈ ನಿಟ್ಟಿನಲ್ಲಿ  ಬಲಾಢ್ಯ ದೇಶವನ್ನು ಕಟ್ಟಲು ವಿದ್ಯಾರ್ಥಿಗಳು  ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪ್ರಾಂಶುಪಾಲ ಪ್ರೊ.ಕೆ.ಬಿ ಧನಂಜಯ, ಕುವೆಂಪು ವಿವಿ ಪ್ಲೇಸ್ ಮೆಂಟ್ ಅಧಿಕಾರಿಗಳು  ಡಾ.ಕೆ.ಆರ್.ಮಂಜುನಾಥ್, ವಾಣಿಜ್ಯ ಹಾಗೂ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಎಂಕೆ. ವೀಣಾ, ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೋ.ಎನ್. ರಾಜೇಶ್ವರಿ ಇನ್ನಿತರರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →