ಶಿವಗಂಗಾ ಯೋಗ ಕೇಂದ್ರದಲ್ಲಿ ಧ್ಯಾನಯೋಗಿ ಶಿವನ ಮೂರ್ತಿ ಹಾಗೂ ಮಾನಸ ಮೌನ ಪಿರಮಿಡ್ ಧ್ಯಾನ ಮಂದಿರ ಲೋಕಾರ್ಪಣೆ

ಶಿವಮೊಗ್ಗ, ಫೆ. 17: ಶಿವ ಸಾಮಾನ್ಯರ ದೇವರು. ಪ್ರಕೃತಿಯ ಪ್ರತೀಕ. ಧ್ಯಾನದ ಮೂಲಪುರುಷ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಿವಮೊಗ್ಗದ ವಿನೋಬನಗರ ಕಲ್ಲಳ್ಳಿಯ ಶಿವಗಂಗಾ ಯೋಗಕೇಂದ್ರದಲ್ಲಿ ಸ್ಥಾಪಿತವಾಗಿರುವ ಧ್ಯಾನಯೋಗಿ ಶಿವನ ಮೂರ್ತಿ ಅನಾವರಣ ಹಾಗೂ ಮಾನಸ ಮೌನ ಪಿರಮಿಡ್ ಧ್ಯಾನಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗ, ಧ್ಯಾನಕ್ಕೆ ಶಿವಗಂಗಾ ಯೋಗ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದೆ. ಮನುಷ್ಯನ ಮನಸ್ಸು ಬುದ್ಧಿಯು ಸಮಸ್ಯೆಗಳ ಸಂತೆ. ಆಸಕ್ತರು ಯೋಗ ಮತ್ತು ಧ್ಯಾನದಿಂದ ನೆಮ್ಮದಿಯನ್ನು ಪಡೆದುಕೊಳ್ಳಬೇಕು. ಯೋಗ ಕೇಂದ್ರ ಕಟ್ಟುವ ಮಹಾಕಾರ್ಯ ಮಾಡಿರುವ ಯಶಸ್ಸು ಸರ್ವರಿಗೂ ಸಿಗಲಿ ಎಂದು ತಿಳಿಸಿದರು.
ಶಿವಗಂಗಾ ಯೋಗ ಕೇಂದ್ರದ ಮಹಾಪೋಷಕ ಗೋಣೀಬೀಡಿನ ಡಾ. ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಯೋಗಾಚಾರ್ಯ ರುದ್ರಾರಾಧ್ಯರು ನಿಜವಾದ ಯೋಗಿ. ನಿಸ್ವಾರ್ಥಿಯಾದ ಅವರು ತಾವು ಪಡೆದ ಯೋಗ ಶಕ್ತಿಯನ್ನು ಇತರಿಗೆ ಹಂಚಿದ ವ್ಯಕ್ತಿ. ಯೋಗ ಬರಬೇಕು ಎಂದರೆ ಯೋಗಿ ಆಗಿರಬೇಕು ಎಂದರು.
ಶಿವಗಂಗೆಯ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವನನ್ನು ನೋಡಲಿಕ್ಕಾಗದು. ಅನುಕ್ಷಣವು ಶಿವನನ್ನು ನೆನೆಯಬೇಕೆಂದು ಹಿರಿಯರು ಮನೆಯಲ್ಲಿರುವ ಸದಸ್ಯರಿಗೆ ಶಿವನ ಹೆಸರು ಇಡುತ್ತಿದ್ದರು. ಮೋಕ್ಷಕ್ಕೆ ಶಿವನೆಂಬ ಎರಡು ಅಕ್ಷರ ಸಾಕು. ಧ್ಯಾನ ಯೋಗಿ ಶಿವ ತಪಸ್ಸು ಮಾಡುತ್ತಿರುತ್ತಾನೆ. ನಮ್ಮನ್ನು ನಾವು ಅರ್ಥೈಸಿಕೊಳ್ಳಲು ತಪಸ್ಸು ಧ್ಯಾನ ಅವಶ್ಯಕ ಎಂದು ಹೇಳಿದರು.
ನಾವು ಶಾಂತವಾಗಿ ಆರೋಗ್ಯವಾಗಿರಬೇಕು. ಮುಖದಲ್ಲಿ ತೇಜಸ್ಸಿದೆ ಎಂದರೆ ಅವನು ಯೋಗಿ ಎಂದು ತಿಳಿಯಬಹುದು. ಮನುಷ್ಯ ಕೊಟ್ಟದ್ದು ಮನೆಯ ತನಕ ದೇವರು ಕೊಟ್ಟದ್ದು ಕೊನೆಯ ತನಕ. ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿ ನಮ್ಮ ಮನವ ಸಂತೈಸಿಕೊಂಡು ಶಿವನನ್ನು ಭಕ್ತಿಯಿಂದ ಸ್ಮರಿಸಿದರೆ ಅವನಿಗೆ ನಮ್ಮನ್ನು ನಾವು ಅರ್ಪಣೆ ಮಾಡಿ ಕೊಂಡಂತೆ. ಸರ್ವ ವ್ಯಾಪಿಯಾಗಿರುವ ಭಗವಂತನಲ್ಲಿ ಭಕ್ತಿಯನ್ನು ಸಮರ್ಪಿಸಿ ಅವನ ಕೃಪೆಯನ್ನು ಪಡೆಯಬಹುದು ಎಂದು ಆಶೀರ್ವದಿಸಿದರು.
ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಎಸ್.ಲಿಂಗಮೂರ್ತಿ, ಯೋಗ ಕೇಂದ್ರದ ವಿಶ್ವಸ್ಥ ಸಮಿತಿಯ ಬಿ.ಸಿ.ನಂಜುಂಡ ಶೆಟ್ಟಿ, ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಕಲಗೋಡು ರತ್ನಾಕರ್, ಹೊಸತೋಟ ಸೂರ್ಯ ನಾರಾಯಣ್, ಬಿ.ವೈ.ಅರುಣಾದೇವಿ, ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ, ಡಾ. ವಿಮಲಾ, ಡಾ. ಎನ್.ಎಲ್.ನಾಯಕ್, ಪುಷ್ಪ ಶೆಟ್ಟಿ, ಜಿ.ವಿಜಯಕುಮಾರ್, ವಿಜಯ ಬಾಯರ್, ಡಾ. ಗಾಯತ್ರಿ ದೇವಿ ಸಜ್ಜನ್, ಡಾ. ಪದ್ಮನಾಭ ಅಡಿಗ,  ಡಾ. ನಾಗರಾಜ್ ಪರಿಸರ, ಜಿ.ಎಸ್.ಓಂಕಾರ್, ಲವ ಕುಮಾರ ಸ್ವಾಮಿ, ಬಸವರಾಜ್, ಪ್ರಸನ್ನ, ಎಳಂಗೋವನ್, ಕೇಶವಮೂರ್ತಿ, ರಾಜಶೇಖರ್, ಎಚ್.ಎಂ. ಚಂದ್ರಶೇಖರಯ್ಯ, ಕಾಟನ್ ಜಗದೀಶ್ ಇದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →