Horrible road accident near Honnalli: Two dead from Shimoga 3 injured ಹೊನ್ನಾಳಿ ಬಳಿ ಭೀಕರ ರಸ್ತೆ ಅಪಘಾತ : ಶಿವಮೊಗ್ಗದ ಇಬ್ಬರು ಸಾವು – 6 ಜನರಿಗೆ ಗಾಯ

ಹೊನ್ನಾಳಿ ಬಳಿ ಭೀಕರ ರಸ್ತೆ ಅಪಘಾತ : ಶಿವಮೊಗ್ಗದ ಇಬ್ಬರು ಸಾವು – 6 ಜನರಿಗೆ ಗಾಯ

ಹೊನ್ನಾಳಿ / ಶಿವಮೊಗ್ಗ, ಏ. 4: ರಸ್ತೆ ಬದಿಯ ಆಲದ ಮರಕ್ಕೆ ಕಾರೊಂದು (car) ಡಿಕ್ಕಿ (accident) ಹೊಡೆದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು (spot death) 6 ಜನರು ಗಾಯಗೊಂಡಿರುವ (injured) ಘಟನೆ ಹೊನ್ನಾಳಿ ತಾಲೂಕು (honnali) ಅರಕೆರೆಯ ಎ.ಕೆ.ಕಾಲೋನಿ ಸಮೀಪ ಶುಕ್ರವಾರ ಸಂಜೆ ನಡೆದಿದೆ. ( www.udayasaakshi.com )

ಖಾಸಗಿ ಎಲೆಕ್ಟ್ರಿಕಲ್ ಕಂಪೆನಿಯೊಂದರ ಉದ್ಯೋಗಿ, ಶಿವಮೊಗ್ಗದ (shivamogga) ಗಾಂಧಿ ನಗರದ ನಿವಾಸಿ ವೇದಮೂರ್ತಿ (60) ಹಾಗೂ ಅವರ ತಾಯಿ ಶಾರದಮ್ಮ (75) ಮೃತಪಟ್ಟವರೆಂದು ಗುರುತಿಸಲಾಗಿದೆ. ಕುಟುಂಬದ ಇತರೆ 6 ಸದಸ್ಯರು ಗಾಯಗೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ( www.udayasaakshi.com )

ದಾವಣಗೆರೆಯಲ್ಲಿ (davanagere) ಆಯೋಜಿತವಾಗಿದ್ದ ಸಂಬಂಧಿಯೋರ್ವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಹೊನ್ನಾಳಿ ಪೊಲೀಸರು (honnali police station) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.

Villagers welcome retired soldier: procession in open vehicle ನಿವೃತ್ತ ಯೋಧನಿಗೆ ಗ್ರಾಮಸ್ಥರ ಭರ್ಜರಿ ಸ್ವಾಗತ : ತೆರೆದ ವಾಹನದಲ್ಲಿ ಮೆರವಣಿಗೆ Previous post ನಿವೃತ್ತ ಯೋಧನಿಗೆ ಗ್ರಾಮಸ್ಥರ ಭರ್ಜರಿ ಸ್ವಾಗತ : ತೆರೆದ ವಾಹನದಲ್ಲಿ ಮೆರವಣಿಗೆ
Murder case: Rowdy shot in the leg ಶಿವಮೊಗ್ಗ : ರೌಡಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು! Next post ಶಿವಮೊಗ್ಗ : ರೌಡಿ ಕಾಲಿಗೆ ಗುಂಡೇಟು!