Shimoga - Three of the same family committed suicide: a mysterious case! ಶಿವಮೊಗ್ಗ - ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು : ನಿಗೂಢವಾದ ಪ್ರಕರಣ!

ಶಿವಮೊಗ್ಗ – ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು : ನಿಗೂಢವಾದ ಪ್ರಕರಣ!

ಶಿವಮೊಗ್ಗ (shivamogga), ಆ. 13: ಒಂದೇ ಕುಟುಂಬದ ಮೂವರು, ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಆತ್ಮಹತ್ಯೆಗೆ (suicide) ಶರಣಾದ ಘಟನೆ, ಶಿವಮೊಗ್ಗ ನಗರದ ಓ.ಟಿ. ರಸ್ತೆಯ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ.

ಭುವನೇಶ್ವರಿ (41), ಇವರ ಮಗ ದರ್ಶನ್ (21) ಹಾಗೂ ಸಹೋದರ ಮಾರುತಿ (37) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ. ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ (committed suicide by consuming poison) ಶಂಕೆ ವ್ಯಕ್ತಪಡಿಸಲಾಗಿದೆ.

ಈ ಮೊದಲು ಇವರು ನಗರದ ಪಂಚವಟಿ ಕಾಲೋನಿಯಲ್ಲಿ ನೆಲೆಸಿದ್ದರು. ತದನಂತರ ಓ.ಟಿ. ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇವರು ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಕಾರಣವೇನು? ಎಂಬುವುದು ತಿಳಿದುಬಂದಿಲ್ಲ. ಮಂಗಳವಾರ ಇವರ ಸಂಬಂಧಿಯೋರ್ವರು ಮನೆಯ ಬಳಿ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ದೊಡ್ಡಪೇಟೆ ಠಾಣೆ ಪೊಲೀಸರು (doddapete police station) ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ಧಾರೆ. ಪೊಲೀಸರ ತನಿಖೆಯ ನಂತರಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ Previous post ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ
Election doubt for Shimoga Corporation? What is the appeal of the Congress leaders to the urban development minister? ಶಿವಮೊಗ್ಗ ನಗರ ಪಾಲಿಕೆಗೆ ಚುನಾವಣೆ ಡೌಟ್? ನಗರಾಭಿವೃದ್ದಿ ಸಚಿವರಿಗೆ ಕಾಂಗ್ರೆಸ್ ನಾಯಕರ ಮನವಿಯೇನು? Next post ಶಿವಮೊಗ್ಗ ಪಾಲಿಕೆಗೆ ಚುನಾವಣೆ ಡೌಟ್? ನಗರಾಭಿವೃದ್ದಿ ಸಚಿವರಿಗೆ ಕಾಂಗ್ರೆಸ್ ನಾಯಕರ ಮನವಿಯೇನು?