shiralkoppa murder case | Shiralakoppa - Terrible murder case: The killers cut the body into 7 pieces! ಶಿರಾಳಕೊಪ್ಪದ ಭಯಾನಕ ಹತ್ಯೆ ಪ್ರಕರಣ : 7 ತುಂಡುಗಳಾಗಿ ದೇಹ ಕತ್ತರಿಸಿ ಹಾಕಿದ್ದ ಹಂತಕರು!

shiralkoppa murder case | ಶಿರಾಳಕೊಪ್ಪ – ಭಯಾನಕ ಹತ್ಯೆ ಪ್ರಕರಣ : 7 ತುಂಡುಗಳಾಗಿ ದೇಹ ಕತ್ತರಿಸಿ ಹಾಕಿದ್ದ ಹಂತಕರು!

ಶಿಕಾರಿಪುರ (shikaripura), ಸೆ. 19: ಶಿರಾಳಕೊಪ್ಪದ ನಾಗೀಹಳ್ಳಿ ಗ್ರಾಮ (nagihalli village) ದಲ್ಲಿ ನಡೆದ ವ್ಯಕ್ತಿಯೋರ್ವರ ಹತ್ಯೆ ಪ್ರಕರಣ (murder case) ದಲ್ಲಿ ಬೆಚ್ಚಿ ಬೀಳಿಸುವ ಸಂಗತಿಗಳು ಬೆಳಕಿಗೆ ಬರಲಾರಂಭಿಸಿವೆ. ಮೃತ ದೇಹವನ್ನು 7 ತುಂಡುಗಳಾಗಿ ಹಂತಕರು ಕತ್ತರಿಸಿ, ನಾಲೆಗೆ ಎಸೆದಿದ್ದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ!

ನಾಗೀಹಳ್ಳಿ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕೃಷ್ಣಪ್ಪ (33) ಭೀಕರವಾಗಿ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾರೆ. ಅದೇ ಗ್ರಾಮದ ನಿವಾಸಿಗಳಾದ ಕಿರಣ್ (27), ಗಣೇಶ್ (27) ಹಾಗೂ ಪ್ರತಾಪ್ (24) ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.

ಏನೀದು ಪ್ರಕರಣ? : ಪ್ರಕರಣದ ಮುಖ್ಯ ಆರೋಪಿ ಕಿರಣ್’ಗೆ, ಕೊಲೆಗೀಡಾದ ಕೃಷ್ಣಪ್ಪ ಪತ್ನಿಯ ಪರಿಚಯವಿರುತ್ತದೆ. ಈ ಬಗ್ಗೆ ಕೃಷ್ಣಪ್ಪ ಅವರು ಕಿರಣ್ ಗೆ ಎಚ್ಚರಿಕೆ ನೀಡಿದ್ದರು. ಪತ್ನಿಯ ತಂಟೆಗೆ ಬರದಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡಿದ್ದ ಕಿರಣ್, ತನ್ನಿಬ್ಬರು ಸ್ನೇಹಿತರಾದ ಗಣೇಶ್ ಹಾಗೂ ಪ್ರತಾಪ್ ಜೊತೆ ಸೇರಿಕೊಂಡು ಕೃಷ್ಣಪ್ಪ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ 7/9/2004 ರಂದು ಸ್ನೇಹಿತರ ಮೂಲಕ ಕೃಷ್ಣಪ್ಪನನ್ನು, ಗ್ರಾಮದಿಂದ ಕರೆದೊಯ್ದಿದ್ದ.

ಆತನಿಗೆ ವಿಪರೀತ ಪ್ರಮಾಣದಲ್ಲಿ ಮದ್ಯ ಕುಡಿಸಿದ್ದರು. ನಂತರ ನಾಗೀಹಳ್ಳಿ – ಕುಸ್ಕೂರು ನಡುವಿನ ಕಾಡಿನಲ್ಲಿ ಕೊಲೆ ಮಾಡಿದ್ದರು. ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದರು. ಪ್ಲಾಸ್ಟಿಕ್ ಚೀಲಗಳಲ್ಲಿ ದೇಹದ ತುಂಡುಗಳನ್ನು ತುಂಬಿಕೊಂಡು, ಸೊರಬ ತಾಲೂಕು ಆನವಟ್ಟಿ ಸಮೀಪದ ಗೋಂಧಿ ಬ್ರಿಡ್ ನಿಂದ ವರದಾ ನದಿಗೆ ಎಸೆದಿದ್ದರು.

ದೂರು ದಾಖಲು : 8/9/2004 ಪತಿ ಕೃಷ್ಣಪ್ಪ ನಾಪತ್ತೆಯಾಗಿರುವ ಕುರಿತಂತೆ ಪತ್ನಿಯು ಶಿರಾಳಕೊಪ್ಪ ಪೊಲೀಸ್ ಠಾಣೆ (shiralkoppa police station) ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್’ಪೆಕ್ಟರ್ (psi) ಪ್ರಶಾಂತ್ ಕುಮಾರ್ ಟಿ. ಬಿ ಅವರು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಅದೇ ಗ್ರಾಮದ ಮೂವರು ಆರೋಪಿಗಳ ಬಗ್ಗೆ, ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಟಿ. ಬಿ ಅವರು ಸಂಶಯ ವ್ಯಕ್ತಪಡಿಸಿದ್ದರು. ಅವರನ್ನು ಪತ್ತೆ ಹಚ್ಚಿ ಕರೆತಂದು ವಿಚಾರಣೆಗೊಳಪಡಿಸಿದಾಗ, ಭೀಕರ ಹತ್ಯೆ ಬೆಳಕಿಗೆ ಬಂದಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ವರದಾ ನದಿಯಲ್ಲಿ ಶೋಧಿಸಿದ್ದರು.

ಈ ವೇಳೆ ಮೃತದೇಹದ ತುಂಡೊಂದು ಪತ್ತೆಯಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಟಿ ಬಿ ಅವರ ಸಮಯೋಚಿತ ತನಿಖೆಯಿಂದ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬರುವಂತಾಗಿದೆ. ಆರೋಪಿಗಳು ಜೈಲು ಸೇರುವಂತಾಗಿದೆ.

shimoga | Shimoga : An unknown youth died! ಶಿವಮೊಗ್ಗ : ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಯುವಕ ಸಾವು! Previous post shimoga | ಶಿವಮೊಗ್ಗ : ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಯುವಕ ಸಾವು!
Shimoga Govt Megan Hospital 'Amritdhare' mother's breast milk center for newborn babies! ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ‘ಅಮೃತಧಾರೆ’ ತಾಯಿ ಎದೆ ಹಾಲಿನ ಕೇಂದ್ರ! Next post shimoga | ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ‘ಅಮೃತಧಾರೆ’ ತಾಯಿ ಎದೆ ಹಾಲಿನ ಕೇಂದ್ರ!