shimoga | Shimoga - Nenegudi Phase 2 Outer Ring Road Project: Attention MPs? ಶಿವಮೊಗ್ಗ - ನೆನೆಗುದಿಗೆ ಬಿದ್ದ 2 ನೇ ಹಂತದ ಹೊರ ವರ್ತಲ ರಸ್ತೆ ಯೋಜನೆ : ಗಮನಹರಿಸುವರೆ ಸಂಸದರು? ವರದಿ : ಬಿ. ರೇಣುಕೇಶ್ b renukesha

shimoga | ಶಿವಮೊಗ್ಗ – ನೆನೆಗುದಿಗೆ ಬಿದ್ದ 2 ನೇ ಹಂತದ ಹೊರ ವರ್ತಲ ರಸ್ತೆ ಯೋಜನೆ : ಗಮನಹರಿಸುವರೆ ಸಂಸದರು?

ಶಿವಮೊಗ್ಗ (shivamogga), ಸೆ. 2: ಶಿವಮೊಗ್ಗದ ಹೊರವಲಯದಲ್ಲಿ ವರ್ತುಲ ರಸ್ತೆ (ರಾಷ್ಟ್ರೀಯ ಹೆದ್ದಾರಿಗಳಿಗೆ ಬೈಪಾಸ್ ರಸ್ತೆ ನಿರ್ಮಾಣ) ಯೋಜನೆಯ, 2 ನೇ ಹಂತ (ದಕ್ಷಿಣ ಭಾಗ) ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.

ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ, ಎರಡು ರಾಷ್ಟ್ರೀಯ ಹೆದ್ಧಾರಿಗಳಿಗೆ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಅದರಂತೆ ಒಟ್ಟಾರೆ ಸುಮಾರು 31 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿತ್ತು.

ಈಗಾಗಲೇ 1 ನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಭಾರತೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (NHAI) ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ. ಹಲವೆಡೆ ನಿರ್ಮಾಣ ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದೆ.

ನೆನೆಗುದಿಗೆ : ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ, ಎರಡನೇ ಹಂತದ ರಸ್ತೆ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಮಾರ್ಗ ಹಾದು ಹೋಗುವ ಸ್ಥಳ ಕೂಡ ಗುರುತಿಸಲಾಗಿತ್ತು. ಕೇಂದ್ರದ ಭೂ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿತ್ತು.

ಈ ನಡುವೆ ಏಕಾಏಕಿ ಮತ್ತೊಂದು ಮಾರ್ಗದ ಸಮೀಕ್ಷೆ ನಡೆಸಲಾಗಿತ್ತು. ಮಾರ್ಗದ ಪ್ರಸ್ತಾವನೆ ಕೂಡ ಭೂ ಸಾರಿಗೆ ಇಲಾಖೆಗೆ ಸಲ್ಲಿಕೆಯಾಗಿತ್ತು. ನಂತರ ನಾನಾ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಭೂ ಸಾರಿಗೆ ಇಲಾಖೆಯಿಂದ ಅನುಮೋದನೆ ದೊರಕಿಲ್ಲ.

ಗಮನಹರಿಸಲಿ : ಶ್ರೀರಾಂಪುರ, ಕೋಟೆಗಂಗೂರು, ಅಬ್ಬಲಗೆರೆ ಮೂಲಕ ಪುರಲೆಯವರೆಗೆ 2 ನೇ ಹಂತದ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲಾಗಿದೆ ಎಂಬ ಮಾಹಿತಿ ಈ ಮೊದಲು ಕೇಳಿಬಂದಿತ್ತು. ಆದರೆ ಇದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಸಂಸದರು ಗಮನಿಸಲಿ : ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆ ಅನುಷ್ಠಾನದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (b y raghavendra) ಅವರ ಪಾತ್ರ ಗಮನಾರ್ಹವಾದುದಾಗಿದೆ. ಅವರ ಇಚ್ಛಾಶಕ್ತಿಯ ಕಾರಣದಿಂದಲೇ ಮೊದಲ ಹಂತದ ಯೋಜನೆ ಅನುಷ್ಠಾನಗೊಂಡಿದೆ.

ಅದೇ ರೀತಿಯಲ್ಲಿ 2 ನೇ ಹಂತದ ಯೋಜನೆ ಅನುಷ್ಠಾನಕ್ಕೂ ಸಂಸದರು ಆದ್ಯ ಗಮನಹರಿಸಬೇಕು. ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ಈ ಸಂಬಂಧ ಭೂ ಸಾರಿಗೆ ಇಲಾಖೆ ಮೇಲೆ ಒತ್ತಡ ಹಾಕುವ ಕಾರ್ಯ ನಡೆಸಬೇಕು ಎಂಬುವುದು ನಾಗರೀಕರ ಮನವಿಯಾಗಿದೆ.

Shimoga : Phase 2 (South Side) of the Outer Ring Road (Bypass Road to National Highways) construction project on the outskirts of Shimoga has come to a complete standstill. A bypass road was planned for two national highways passing through Shimoga city. Accordingly, the total distance is about 31 km. It was decided to build a long outer ring road.

bengaluru | Gandhi's Sarvodaya - Ambedkar's Antyodaya Government Mission : CM Siddaramaiah ಗಾಂಧಿಯವರ ಸರ್ವೋದಯ ಅಂಬೇಡ್ಕರ್ ರವರ ಅಂತ್ಯೋದಯ ನೀತಿಗಳೆ ಸರ್ಕಾರದ ಧ್ಯೇಯ : ಸಿಎಂ ಸಿದ್ದರಾಮಯ್ಯ Previous post bengaluru | ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ರವರ ಅಂತ್ಯೋದಯ ಸರ್ಕಾರದ ಧ್ಯೇಯ : ಸಿಎಂ ಸಿದ್ದರಾಮಯ್ಯ
gandhi jayanti | One should act according to conscience : CM Siddaramaiah ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು : ಸಿ.ಎಂ ಸಿದ್ದರಾಮಯ್ಯ Next post bengaluru | ‘ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು’ : ಸಿಎಂ ಸಿದ್ದರಾಮಯ್ಯ