Shimoga Assembly Constituency Electoral Roll Special Revision : Name Verification - Allowance for Amendment ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಹೆಸರು ಪರಿಶೀಲನೆ - ತಿದ್ದುಪಡಿಗೆ ಅವಕಾಶ

shimoga | ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಹೆಸರು ಪರಿಶೀಲನೆ – ತಿದ್ದುಪಡಿಗೆ ಅವಕಾಶ

ಶಿವಮೊಗ್ಗ (shivamogga), ನ. 7 : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2025 ಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ದಿ: 09-11-2024, 10-11-2024, 23-11-2024 ಮತ್ತು 24-11-24 ರಂದು ಮತಗಟ್ಟೆಗಳಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾರರ ಪಟ್ಟಿ ಪರಿಶೀಲಿಸಿ, ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

 17 ವರ್ಷ ತುಂಬಿದ ಅಥವಾ 18 ವರ್ಷ ಪೂರೈಸಿದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ಮತದಾರರ ಗುರುತಿನ ಚೀಟಿಗಳಲ್ಲಿ ಮುದ್ರಣ ದೋಷ ಉಂಟಾಗಿದ್ದರೆ ತಿದ್ದುಪಡಿ ಮಾಡಲು, ಒಂದು ಮತದಾನ ಕೇಂದ್ರದಿಂದ ಮತ್ತೊಂದು ಮತದಾನ ಕೇಂದ್ರಕ್ಕೆ ವಿಳಾಸ ಬದಲಾಯಿಸಿಕೊಂಡಿದ್ದಲ್ಲಿ ವರ್ಗಾವಣೆ ಮಾಡಲು ಹಾಗೂ ಮತದಾರರು ಮೃತಪಟ್ಟಿದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅವಕಾಶವಿದೆ.

ಮತದಾರರು ತಮ್ಮ ಮೊಬೈಲ್ ನ ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ನಮೂನೆ-6 ರಲ್ಲಿ ಸೇರ್ಪಡೆಗೆ, ನಮೂನೆ-7 ರಲ್ಲಿ ತೆಗೆದುಹಾಕಲು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗಾಗಿ, ವರ್ಗಾವಣೆಗಾಗಿ ಅವಕಾಶವಿದೆ.

ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.

A young man from Sagar who was selling ganja in Soraba was arrested! ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ! Previous post soraba news | ಸೊರಬದಲ್ಲಿ ಗಾಂಜಾ ಮಾರುತ್ತಿದ್ದ ಸಾಗರದ ಯುವಕ ಅರೆಸ್ಟ್!
Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!! Next post shimoga | ಶಿವಮೊಗ್ಗದಲ್ಲಿ ಗೊಂದಲ ಸೃಷ್ಟಿಸಿದ ನೂತನ ‘ಇ-ಆಸ್ತಿ’ ವ್ಯವಸ್ಥೆ : ಗಮನಹರಿಸುವುದೆ ಪಾಲಿಕೆ ಆಡಳಿತ?