
shimoga | ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬ್ರೀಫಿಂಗ್!
ಶಿವಮೊಗ್ಗ (shivamogga), ಜ. 12: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ, ಜ. 12 ರ ಭಾನುವಾರ ಆಯಾ ಠಾಣೆಗಳ ಪೊಲೀಸರು ಬ್ರೀಫಿಂಗ್ ಸಭೆ ನಡೆಸಿದರು.
ಶಿವಮೊಗ್ಗ ಎ, ಶಿವಮೊಗ್ಗ ಬಿ ಉಪ ವಿಭಾಗ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ನಡೆಸಿದರು.
ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ಬ್ರೀಫಿಂಗ್ ವೇಳೆ ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಠಾಣೆಗಳ ಪೊಲೀಸ್ ನಿರೀಕ್ಷಕರು, ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪೊಲೀಸ್ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ?: ಶಿವಮೊಗ್ಗ ನಗರದ ಸವಾರ ಲೈನ್ ರಸ್ತೆಯ ಗೌರವ್ ಲಾಡ್ಜ್ ಸಮೀಪ, ಎಎ ವೃತ್ತ, ರಾಗಿಗುಡ್ಡ, ಸೋಮಿನಕೊಪ್ಪ, ಕುಂಸಿ,
ಭದ್ರಾವತಿ ನಗರದ ಬಸವೇಶ್ವರ ವೃತ್ತ, ನ್ಯೂ ಟೌನ್ ಕೂಲಿ ಬ್ಲಾಕ್ ಶೆಡ್, ಹೊಸಮನೆ ಅಶ್ವತ್ ನಗರ, ಹೊಳೆಹೊನ್ನೂರು ಭಗೀರತ ವೃತ್ತ, ಪೇಪರ್ ಟೌನ್ ನ ದೊಡ್ಡ ಗೋಪೇನಹಳ್ಳಿ,
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲ ಗೌಡ ವೃತ್ತ, ಆಗುಂಬೆಯ ಮೇಘರವಳ್ಳಿ, ಸಾಗರ ಪಟ್ಟಣದ ಯಡಜಿಗಳೆಮನೆ, ಆನಂದಪುರ ಟೌನ್, ಆನವಟ್ಟಿ ಹಾಗೂ ಸೊರಬ ಪಟ್ಟಣದಲ್ಲಿ ಪೊಲೀಸ್ ಬ್ರೀಫಿಂಗ್ ಸಭೆಗಳು ಆಯೋಜನೆಯಾಗಿದ್ದವು.
Shimoga, January 12: On Sunday, January 12, the police of the respective stations held a briefing meeting at public places under the jurisdiction of various police stations in the district.
Police officers and staff working in Shimoga A, Shimoga B sub division, Bhadravati, Sagar, Shikaripura and Tirthahalli sub division police stations conducted a briefing by the station officers of the respective stations.
Information was given during the briefing about the duties to be performed and the instructions of the superiors. Police inspectors, circle inspectors and staff of the stations were present on this occasion, the police department said in a press release issued on Sunday.