B Y Raghavendra criticism against Madhu Bangarappa! ‘ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳಿವೆ!’ : ಮಧು ಬಂಗಾರಪ್ಪ ವಿರುದ್ಧ ಬಿ ವೈ ರಾಘವೇಂದ್ರ ಟೀಕಾಪ್ರಹಾರ!

shimoga | ‘ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳಿವೆ!’ : ಮಧು ಬಂಗಾರಪ್ಪ ವಿರುದ್ಧ ಬಿ ವೈ ರಾಘವೇಂದ್ರ ಟೀಕಾಪ್ರಹಾರ!

ಶಿವಮೊಗ್ಗ (shivamogga), ಜ. 27: ಭದ್ರಾವತಿ ವಿಐಎಸ್’ಎಲ್, ಶರಾವತಿ ಸಂತ್ರಸ್ತರ ವಿಚಾರದ ಕುರಿತಂತೆ ಸಚಿವ ಮಧು ಬಂಗಾರಪ್ಪ ಅವರ ಟೀಕೆಗೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳಿವೆ. ಸುಳ್ಳು ಹೇಳುವುದನ್ನು ಬಿಡಿ. ಅಹಂಕಾರದ ಮಾತುಗಳು ಸರಿಯಲ್ಲ’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಜ. 27 ರಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪರ ಕುರಿತಂತೆ ಏಕವಚನದಲ್ಲಿ ಮಾತನಾಡಿದ್ದಾರೆ. ಜಿಲ್ಲಾ ಮಂತ್ರಿಗಳ ಬಗ್ಗೆ ನಾವೇನು ಅವಹೇಳನ ಮಾಡಿಲ್ಲ. ಅವರ ಸ್ಥಾನಕ್ಕೆ ಗೌರವ ಕೊಡುತ್ತಿದ್ದೆವೆ. ಆದರೆ ಇತ್ತೀಚೆಗೆ ಅವರ ಬಾಯಲ್ಲಿ ಬರುತ್ತಿರುವ ಹೇಳಿಕೆಗಳು ಸರಿಯಲ್ಲ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದ ಕುರಿತಂತೆ, ಇಷ್ಟು ವರ್ಷ ನೀವೇನು ಮಾಡಿದ್ದೀರಿ? ನಿಮ್ಮ ಹಿಂದೆ ಇದ್ದವರು ಏನು ಮಾಡಿದ್ರು? ಸದರಿ ವಿಚಾರ ದೆಹಲಿಗೆ ಹೋಯ್ತು? ಸುಪ್ರಿಂ ಕೋರ್ಟ್’ಗೆ ಹೋಯ್ತು? ಎಂಬುವುದು ಸೇರಿದಂತೆ ಬೇಕದಾಷ್ಟು ವಿಚಾರಗಳಿವೆ, ನಿಮ್ಮ ಮುಖಕ್ಕೆ ಮಸಿ ಬಳಿಯಲು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಭದ್ರಾವತಿ ವಿಐಎಸ್’ಎಲ್ ಕಾರ್ಖಾನೆಯ ದುಃಸ್ಥಿತಿಯು ನಿಮ್ಮ (ಕಾಂಗ್ರೆಸ್) ಪಾಪದ ಕೂಸಾಗಿದೆ. ಇವತ್ತಿನ ಸಮಸ್ಯೆಯಲ್ಲ. ಇಂದಿನವರೆಗೂ ಅದನ್ನು ರನ್ನಿಂಗ್ ಕಂಡಿಷನ್ ನಲ್ಲಿಟ್ಟಿಕೊಂಡಿರುವುದೆ ನಮ್ಮ ಸಾಧನೆಯಾಗಿದೆ. ಆಂಧ್ರ ಪ್ರದೇಶದ ಐರನ್ ಸ್ಟೀಲ್ ಇಂಡಸ್ಟ್ರೀ ಬಗ್ಗೆ ತೀರ್ಮಾನವಾಗಿದೆ. ವಿಐಎಸ್’ಎಲ್ ಬಗ್ಗೆಯೂ ಉತ್ತಮ ನಿರ್ಧಾರವಾಗುವ ವಿಶ್ವಾಸವಿದೆ ಎಂದರು.

ಕಳೆದ 60 ವರ್ಷಗಳಿಂದ ಆಳ್ವಿಕೆ ನಡೆಸಿಕೊಂಡು ಬಂದ ನೀವು (ಕಾಂಗ್ರೆಸ್) ಮಾಡಿದ ತಪ್ಪು ಯಾರೂ ಕೂಡ ತೊಳೆಯಲು ಆಗುವುದಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಕಣ್ಣೀರಿಗೆ ನೀವು ಕಾರಣಕರ್ತರಾಗಿದ್ಧಾರೆ. ವಿಐಎಸ್’ಎಲ್ ಕಾರ್ಖಾನೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದ್ದಾರೆ.

ಕೇಂದ್ರ ಅರಣ್ಯ ಸಚಿವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾಗಿ ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿದೆ. ಇದಕ್ಕೆಲ್ಲ ನೀವು ಟೀಕೆ ಮಾಡುತ್ತಿರುವುದೇಕೆ ಎಂದು ಮಧು ಬಂಗಾರಪ್ಪರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಾಪಿಸಿದವರು ಯಾರು? : ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ. ಆದರೆ ಮಧು ಬಂಗಾರಪ್ಪ ಅವರು ನಮ್ಮ ತಂದೆ (ಎಸ್ ಬಂಗಾರಪ್ಪ) ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೇವಲ ಸುಳ್ಳಿನ ಕಂತೆಗಳನ್ನ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವರಾಗಿ ದುರಂಹಕಾರದ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ. ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಕೆಲಸ ಮಾಡಿ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನ ವಾಪಾಸ್ ಆಗಿದೆ. ಇದರ ಬಗ್ಗೆ ಗಮನ ಹರಿಸಿ. ಆದರೆ ಹಾಲಪ್ಪರಂತಹ ಹಿರಿಯ ನಾಯಕರಿಗೆ ಸೆಗಣಿ ತಿನ್ನುತ್ತಿದ್ದರಾ? ಎಂಬ ಮಾತುಗಳನ್ನಾಡುತ್ತಿರಾ ಎಂದರೆ ನಿಮಗೆಷ್ಟು ದುರಹಂಕಾರವಿದೆ ಎಂದು ಪ್ರಶ್ನಿಸಿದರು.

ಶಿವಮೊಗ್ಗ ನಗರದ ಗೋವಿಂದಾಪುರ ಆಶ್ರಯ ಯೋಜನೆ ಮನೆ ಹಂಚಿಕೆ ವಿಚಾರದ ಬಗ್ಗೆ ಸಚಿವ ಮಧು ಬಂಗಾರಪ್ಪ ವಿರುದ್ದ ಸಂಸದರು ಟೀಕಾಪ್ರಹಾರ ನಡೆಸಿದರು. ‘ಆಶ್ರಯ ಯೋಜನೆ ಮನೆಗಳ ಹಂಚಿಕೆಗೆ ನಿಗದಿಯಾಗಿದ್ದ ದಿನಾಂಕವನ್ನು ಬೇಕೆಂದಲೆ ಮುಂದೆ ಹಾಕಲಾಗುತ್ತಿದೆ.  ಸದರಿ ಯೋಜನೆ ಅನುಷ್ಠಾನಕ್ಕೆ ಈ ಹಿಂದೆ ಕೆ ಎಸ್ ಈಶ್ವರಪ್ಪ, ಶಾಸಕ ಚನ್ನಬಸಪ್ಪ ಅವರು ಸಾಕಷ್ಟು ಶ್ರಮಿಸಿದ್ದಾರೆ. ಬಡವರಿಗೆ ಸೂರು ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಆದರೆ ನೀನೇನೋ ಒಂದು ಟ್ಯೂಬ್ ಲೈಟ್ ಹಾಕಿಸಿ, ಉದ್ಘಾಟನೆಗೆ ಎರಡ್ಮೂರು ತಿಂಗಳು ಸಮಯವಾಕಾಶ ತೆಗೆದುಕೊಂಡರೆ ಹೇಗೆ’ ಎಂದು ಮಧು ಬಂಗಾರಪ್ಪರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಇನ್ನಾದರೂ ಸಣ್ಣತನ ಬಿಡಿ. ನಿಮ್ಮ ಬಗ್ಗೆ ಗೌರವವಿದೆ. ಅದನ್ನು ಉಳಿಸಿಕೊಳ್ಳಿ. ವಿರೋಧಪಕ್ಷವಾಗಿ ಸಹಕಾರ ನೀಡುತ್ತಿದ್ದೆವೆ. ಅಭಿವೃದ್ದಿಪರ ಚಿಂತನೆಗಳತ್ತ ಗಮನಹರಿಸಿ. ಕೇಂದ್ರದಿಂದ ಏನಾಗಬೇಕೋ ಅದನ್ನು ನಾವು ಗಮನಿಸುತ್ತೆವೆ. ರಾಜ್ಯ ಸರ್ಕಾರದಿಂದ ಏನಾಗಬೇಕೋ ಅದನ್ನು ನೀವು ಗಮನಿಸಿ. ಈ ಮೂಲಕ ಜಿಲ್ಲೆಯ ಅಭಿವೃದ್ದಿ ರಥ ಏಳೆಯೋಣ ಎಂದು ಇದೇ ವೇಳೆ ಮಧು ಬಂಗಾರಪ್ಪರಿಗೆ ಸಲಹೆ ನೀಡಿದ್ದಾರೆ.


Lok Sabha member B Y Raghavendra has expressed outrage over minister Madhu Bangarappa’s criticism on Bhadravati VIS’L, Sharavati victims. He spoke to reporters on January 27 in Shimoga city. We have not disparaged the district ministers. We respect his position. But the statements coming out of his mouth recently are not correct, he said.

shikaripur | Shikaripura PLD Bank Election: After 25 years, Congress in control! shikaripur | ಶಿಕಾರಿಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆ : 25 ವರ್ಷಗಳ ನಂತರ ಕಾಂಗ್ರೆಸ್ ವಶಕ್ಕೆ! Previous post shikaripur | ಶಿಕಾರಿಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆ : 25 ವರ್ಷಗಳ ನಂತರ ಕಾಂಗ್ರೆಸ್ ವಶಕ್ಕೆ!
shimoga | Shimoga: A man from Bihar who tried to steal money from an ATM was arrested! shimoga | ಶಿವಮೊಗ್ಗ : ಎಟಿಎಂನಲ್ಲಿ ಹಣ ಕಳವಿಗೆ ಯತ್ನಿಸಿದ ಬಿಹಾರದ ವ್ಯಕ್ತಿ ಸೆರೆ! Next post shimoga | ಶಿವಮೊಗ್ಗ : ಎಟಿಎಂನಲ್ಲಿ ಹಣ ಕಳವಿಗೆ ಯತ್ನಿಸಿದ ಬಿಹಾರದ ವ್ಯಕ್ತಿ ಸೆರೆ!