
shimoga | ಶಿವಮೊಗ್ಗ : ಎಟಿಎಂನಲ್ಲಿ ಹಣ ಕಳವಿಗೆ ಯತ್ನಿಸಿದ ಬಿಹಾರದ ವ್ಯಕ್ತಿ ಸೆರೆ!
ಶಿವಮೊಗ್ಗ (shivamogga), ಜ. 27: ಶಿವಮೊಗ್ಗದ ನೆಹರು ರಸ್ತೆಯ ಎಟಿಎಂವೊಂದರಲ್ಲಿ ಹಣ ಕಳವಿಗೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು, ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಕೋಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಿಹಾರ ರಾಜ್ಯದ ಸಾರಸ್ ಜಿಲ್ಲೆ ಸಮಾನಿ ತಾಲೂಕು ಜಲೈ ಗ್ರಾಮದ ನಿವಾಸಿ ಮಹಮ್ಮದ್ ವಸೀಂ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಕಾಂಕ್ರಿಟ್ ಕೆಲಸ ಮಾಡುವವನಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಜ. 27 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜ. 26 ರ ರಾತ್ರಿ ನೆಹರು ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ, ನಗದು ಕಳವಿಗೆ ಯತ್ನಿಸಲಾಗಿತ್ತು. ಎಟಿಎಂನಲ್ಲಿ ಅಳವಡಿಸಿದ್ದ ಸೈರನ್ ಶಬ್ದದಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಅವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ ಜಿ ಕಾರಿಯಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಬು ಆಂಜನಪ್ಪ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಹರೀಶ್ ಪಟೇಲ್, ಸಬ್ ಇನ್ಸ್’ಪೆಕ್ಟರ್ ಸಂತೋಷ್ ಭಾಗೋಜಿ, ಎಎಸ್ಐ ಹರ್ಷ, ಸಿಬ್ಬಂದಿಗಳಾದ ಕಿಶೋರ್, ಆಂಜಿನಪ್ಪ, ಕಾಂತರಾಜ್, ಪ್ರಕಾಶ್, ಸೋಮು ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Shimoga, January 27: The Kote Thane police have succeeded in arresting the accused who attempted to steal money from an ATM on Nehru Road in Shimoga within a few hours of the incident.
Mohammed Wasim (22), a resident of Samani Taluk Jalai village in Saras district of Bihar state, has been identified as the arrested accused. The district police department said that he is a concrete worker. In a press release issued on 27
On the night of January 26, an attempt was made to withdraw cash from the ATM of the Canara Bank branch on Nehru Road. The accused fled from the spot due to the sound of the siren installed in the ATM.