shimoga | ಶರಣಾಗತರಾದ ನಕ್ಸಲರಲ್ಲಿ ಇಬ್ಬರು ಶಿವಮೊಗ್ಗ ಪೊಲೀಸರ ವಶಕ್ಕೆ!

shimoga | Two of the surrendered Naxals are in the custody of Shimoga police! shimoga | ಶರಣಾಗತರಾದ ನಕ್ಸಲರಲ್ಲಿ ಇಬ್ಬರು ಶಿವಮೊಗ್ಗ ಪೊಲೀಸರ ವಶಕ್ಕೆ!

ಶಿವಮೊಗ್ಗ (shivamogga), ಫೆ. 10: ಕಳೆದ ತಿಂಗಳು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತರಾಗಿದ್ದ 6 ನಕ್ಸಲೀಯರಲ್ಲಿ, ಇಬ್ಬರನ್ನು ಬಾಡಿ ವಾರಂಟ್ ಮೂಲಕ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಂಡಗಾರು ಲತಾ ಹಾಗೂ ವನಜಾಕ್ಷಿ ಬಾಳೆಹೊಳೆ ಎಂಬುವರೆ, ಪೊಲೀಸರು ವಶಕ್ಕೆ ಪಡೆದ ನಕ್ಸಲೀಯರು ಎಂದು ಗುರುತಿಸಲಾಗಿದೆ. ಇವರನ್ನು ಬೆಂಗಳೂರಿನಿಂದ ಕರೆತರಲಾಗುತ್ತಿದೆ ಎನ್ನಲಾಗಿದೆ.

ಈ ಹಿಂದೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಹಾಗೂ ಹೊಸನಗರ ಠಾಣೆಯಲ್ಲಿ ದಾಖಲಾಗಿದ್ದ 1 ಪ್ರಕರಣಗಳಿಗೆ ಸಂಬಂಧಿಸಿದಂತೆ, ಈ ಇಬ್ಬರು ನಕ್ಸಲೀಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

ಫೆ. 10 ರ ಮಧ್ಯಾಹ್ನ ತೀರ್ಥಹಳ್ಳಿ ನ್ಯಾಯಾಲಯಕ್ಕೆ ನಕ್ಸಲೀಯರನ್ನು  ಪೊಲೀಸರು ಹಾಜರುಪಡಿಸುವ ಸಾಧ್ಯತೆಯಿದೆ. ಮಂಗಳವಾರ ಮತ್ತೊಂದು ಪ್ರಕರಣದಲ್ಲಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಗೂ ಬುಧವಾರ ಹೊಸನಗರ ಕೋರ್ಟ್’ಗೆ  ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Shimoga, Feb 10: Of the 6 Naxalites who surrendered in the presence of CM Siddaramaiah last month, the Shimoga police have taken into custody two through body warrant.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →