shimoga | Police special patrol in Shimoga Bhadravati Sagar Anavatti : 197 cases! shimoga | ಶಿವಮೊಗ್ಗ ಭದ್ರಾವತಿ ಸಾಗರ ಆನವಟ್ಟಿಯಲ್ಲಿ ಪೊಲೀಸ್ ವಿಶೇಷ ಗಸ್ತು : 197 ಕೇಸ್!

shimoga | ಶಿವಮೊಗ್ಗ, ಭದ್ರಾವತಿ, ಸಾಗರ, ಆನವಟ್ಟಿಯಲ್ಲಿ ಪೊಲೀಸ್ ವಿಶೇಷ ಗಸ್ತು : 197 ಕೇಸ್!

ಶಿವಮೊಗ್ಗ (shivamogga), ಫೆ. 16: ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ಆನವಟ್ಟಿಯಲ್ಲಿ ಫೆ. 15 ರ ಸಂಜೆ ಆಯಾ ಠಾಣೆಗಳ ಪೊಲೀಸರು ವಿಶೇಷ ಕಾಲ್ನಡಿಗೆ ಗಸ್ತು ನಡೆಸಿದ್ದಾರೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ಕಾನೂನು – ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ  ಪೊಲೀಸರು ವಿಶೇಷ ಕಾಲ್ನಡಿಗೆ ಗಸ್ತು ನಡೆಸಿದ್ದಾರೆ ಎಂದು ಮಾಹಿತಿ ನೀಡಿದೆ.

ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವರು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. 123 ಲಘು ಪ್ರಕರಣ, ಕೋಟ್ಪಾ ಕಾಯ್ದೆಯಡಿ 18 ಹಾಗೂ ಮೋಟಾರು ಕಾಯ್ದೆಯಡಿ 56 ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದೆ.

ಎಲ್ಲೆಲ್ಲಿ ಗಸ್ತು? :  ಶಿವಮೊಗ್ಗ ನಗರದ ಕಸ್ತೂರ ಬಾ ರಸ್ತೆ, ಎಂಕೆಕೆ ರಸ್ತೆ, ಭರ್ಮಪ್ಪ ನಗರ, ಓಟಿ ರಸ್ತೆ, ಅಣ್ಣಾನಗರ, ಮಂಜುನಾಥ ಬಡಾವಣೆ, ಅಶೋಕ ರಸ್ತೆ, ಕೋಟೆ ರಸ್ತೆ, ಓಲ್ಡ್ ಬಾರ್ ಲೈನ್ ರಸ್ತೆ,

ಪೆನ್ಷನ್ ಮೊಹಲ್ಲಾ, ಕಾಮತ್ ಪೆಟ್ರೋಲ್ ಬಂಕ್ ಸಮೀಪ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ರಾಜೇಂದ್ರ ನಗರ, ರವೀಂದ್ರ ನಗರ, ಬಸವನಗುಡಿ, ಜೈಲ್ ರಸ್ತೆ, ಸೋಮಿನಕೊಪ್ಪ, ಬೊಮ್ಮನಕಟ್ಟೆ, ಪುರಲೆ ಹಾಗೂ ತಾಲೂಕಿನ ಆಯನೂರು ಗ್ರಾಮದಲ್ಲಿ ಕಾಲ್ನಡಿಗೆ ಗಸ್ತು ನಡೆಸಲಾಗಿದೆ.

ಭದ್ರಾವತಿ ನಗರದ ನ್ಯೂಟೌನ್, ಖಾಜಿ ಮೊಹಲ್ಲಾ, ಹನುಮಂತನಗರ, ಸತ್ಯಸಾಯಿನಗರ ಹಾಗೂ  ಬಾರಂದೂರು, ಶಂಕರಘಟ್ಟ ಗ್ರಾಮದಲ್ಲಿ ಗಸ್ತು ನಡೆಸಲಾಗಿದೆ.

ಸಾಗರ ಪಟ್ಟಣದ ಹೊಸನಗರ ರಸ್ತೆ, ಜನ್ನೇಹಕ್ಲು ಹಾಗೂ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ನೆಹರು ನಗರ ವೃತ್ತದಲ್ಲಿ ಕಾಲ್ನಡಿಗೆ ಗಸ್ತು ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.  

Shimoga, Feb 16: In Shimoga Bhadravati Sagar and Anavatti on the evening of Feb 15, the police of respective stations conducted special foot patrols. At this time, those who were behaving suspiciously and misbehaving in public places were detained and interrogated. 123 light cases, 18 under Kotpa Act and 56 under Motor Act have been registered.

Where is the patrol? : Shivamogga city Kastura Ba Road, MKK Road, Bharmappa Nagar, OT Road, Annanagar, Manjunath Barangay, Ashoka Road, Kote Road, Old Bar Line Road, Pension Mohalla, Kamath Petrol Station, Upper Tunganagar, Lower Tunganagar, Rajendra Nagar, Ravindra Nagar, Basavanagudi, Jail Road, Sominakoppa, Bommanakatte, Purale and Ayanur village of the taluk… Foot patrols were conducted.

in bhadravati city Patrols were conducted in Newtown, kazi Mohalla, Hanumantanagar, Sathyasainagar and Barandur, Sankaraghatta village. sagara city Hosnagar road, Jannehaklu and soraba taluk anavatti town Nehru Nagar circle… foot patrol has been conducted. The police department has informed that.

CM Khadak instructs DC-SPs to curb the use of rowdies for micro finance loan collection! bengaluru | ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ರೌಡಿಗಳ ಬಳಕೆಗೆ ಕಡಿವಾಣ ಹಾಕಲು DC - SP ಗಳಿಗೆ ಸಿಎಂ ಖಡಕ್ ಸೂಚನೆ! Previous post bengaluru | ಮೈಕ್ರೋ ಫೈನಾನ್ಸ್ : ರೌಡಿಗಳ ಬಳಕೆಗೆ ಕಡಿವಾಣ ಹಾಕಲು DC – SP ಗಳಿಗೆ ಸಿಎಂ ಖಡಕ್ ಸೂಚನೆ!
Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!! Next post shimoga | ರಾಜ್ಯದಲ್ಲಿ ಇ-ಖಾತಾ ವಿಳಂಬಕ್ಕೆ CM ಗರಂ : ಶಿವಮೊಗ್ಗ ಪಾಲಿಕೆಯಲ್ಲಿ ಪರಿಹಾರವಾಗಲಿದೆಯಾ ಗೊಂದಲ?