
shimoga | ಶಿವಮೊಗ್ಗ : ಶಾಲಾ ಮಕ್ಕಳಿಗೆ ಅಪಾಯಕಾರಿಯಾದ ಹೆದ್ಧಾರಿಗಳು – ಗಮನಹರಿಸುವರೆ ಪಿಡಬ್ಲ್ಯೂಡಿ, ಟ್ರಾಫಿಕ್ ಪೊಲೀಸರು?
ಶಿವಮೊಗ್ಗ, ಫೆ. 17: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪ ಬಡಾವಣೆ ಮೂಲಕ ಹಾದು ಹೋಗಿರುವ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ, ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಾಗರೀಕರು ದೂರಿದ್ದಾರೆ.
ಸದರಿ ಹೆದ್ದಾರಿಗಳಲ್ಲಿ ಲಾರಿ, ಬಸ್ ಸೇರಿದಂತೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಾಗರ ರಾಷ್ಟ್ರೀಯ ಹೆದ್ದಾರಿ ಹಾಗೂ ಶಿಕಾರಿಪುರ ಹೆದ್ದಾರಿಗಳ ಸಂಪರ್ಕಕ್ಕೆ ಸಮೀಪದ ರಸ್ತೆಗಳಾಗಿದ್ದು, ಬೈಪಾಸ್ ರಸ್ತೆಯಂತೆ ಪರಿವರ್ತಿತವಾಗಿವೆ. ಇದರಿಂದ ಸಾಕಷ್ಟು ವಾಹನ ದಟ್ಟಣೆಯಿದೆ.
ಜನವಸತಿ ಪ್ರದೇಶವಾದ ಸೋಮಿನಕೊಪ್ಪ ಬಡಾವಣೆಯಲ್ಲಿ, ಲಾರಿಗಳು ಸೇರಿದಂತೆ ಇತರೆ ಸರಕು ಸಾಗಾಣೆ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಹೆದ್ಧಾರಿಯ ಪ್ರಮುಖ ಸ್ಥಳಗಳಲ್ಲಿ ಅಗತ್ಯ ಸಂಚಾರಿ ಸುರಕ್ಷತಾ ಕ್ರಮಗಳ ಅನುಷ್ಠಾನವಾಗಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ..
ಅದರಲ್ಲಿಯೂ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಯಿದ್ದು, ನೂರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಸದರಿ ಶಾಲಾ ಮಕ್ಕಳಿಗೆ ಹೆದ್ಧಾರಿಗಳು ಅಕ್ಷರಶಃ ಅಪಾಯಕಾರಿಯಾಗಿ ಪರಿವರ್ತಿತವಾಗಿದೆ. ಈಗಾಗಲೇ ಕೆಲ ಮಕ್ಕಳು ಸಣ್ಣಪುಟ್ಟ ಅಪಘಾತಕ್ಕೆ ತುತ್ತಾಗಿದ್ದಾರೆ ಎಂದು ಸ್ಥಳೀಯ ಯುವ ಮುಖಂಡ ಮುಸ್ಸಿ ಗೌಡ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನೋರ್ವ ಅಪಘಾತದಲ್ಲಿ ಗಾಯಗೊಂಡಿದ್ದಾನೆ. ಈ ಕಾರಣದಿಂದ ಸರ್ಕಾರಿ ಶಾಲೆ ಹಾಗೂ ಬಡಾವಣೆ ಪ್ರಮುಖ ಸ್ಥಳಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಿಡಬ್ಲ್ಯೂಡಿ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸರು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಮಿತಿಯೊಳಗೆ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಆಡಳಿತ ಕೈಗೊಳ್ಳಬೇಕು. ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ದ ಕ್ರಮಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ಹಾಗೂ ನಾಗರೀಕರು ಸುರಕ್ಷಿತವಾಗಿ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಸ್ಥಳೀಯ ನಿವಾಸಿಗಳೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮುಸ್ಸಿ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
shimoga, February 17: Local citizens have complained that the number of accidents is increasing day by day on the state and district highways passing through Sominakoppa barangay under Shimoga Municipal Corporation 1st Ward.
Hundreds of vehicles including lorries and buses travel on the state and district highway between Sominakoppa and Kotegangur every day. It has been converted Sagara National Highway bypass road. There is a lot of traffic due to this.