Shivamogga: Train halts at Arasalu and Kumsi stations to continue ಶಿವಮೊಗ್ಗ : ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮುಂದುವರಿಕೆ

shimoga to kumbh mela train | ಶಿವಮೊಗ್ಗ – ಬನಾರಸ್ ರೈಲ್ವೆ ಪ್ರಯಾಣಿಕರಿಗೆ ಕೊನೆಗೂ ಲಭ್ಯವಾದ ಊಟೋಪಚಾರದ ವ್ಯವಸ್ಥೆ!

ಶಿವಮೊಗ್ಗ (shivamogga), ಫೆ. 24: ಪ್ರಯಾಗ್’ರಾಜ್ ಕುಂಭಮೇಳದ ಶಿವಮೊಗ್ಗ – ಬನಾರಸ್ ವಿಶೇಷ ರೈಲಿನಲ್ಲಿ, ಕ್ಯಾಟರಿಂಗ್ (ಊಟೋಪಚಾರದ) ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ಪ್ರಯಾಣಿಕರಿಗೆ, ಕೊನೆಗೂ ರೈಲಿನಲ್ಲಿ ಕೇಟರಿಂಗ್ ವ್ಯವಸ್ಥೆ ಲಭ್ಯವಾಗಿದೆ!

ಫೆ. 23 ರ ಮಧ್ಯಾಹ್ನದಿಂದಲೇ ರೈಲಿನಲ್ಲಿ ಊಟ, ತಿಂಡಿ, ಟೀ, ಕಾಫಿ ಮತ್ತೀತರ ತಿಂಡಿ-ತಿನಿಸು ಮಾರಾಟದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ ಎಂದು ಸದರಿ ರೈಲಿನಲ್ಲಿ ಕುಂಭಮೇಳಕ್ಕೆ ಪ್ರಯಾಣಿಸುತ್ತಿರುವ ರೈಲ್ವೆ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿ ಕೇಟರಿಂಗ್ ವ್ಯವಸ್ಥೆ ಲಭ್ಯವಾಗದಿದ್ದರಿಂದ, ಊಟೋಪಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಕೆಲ ಪ್ರಯಾಣಿಕರು ಉಪವಾಸಕ್ಕೆ ತುತ್ತಾಗುವಂತಾಗಿತ್ತು. ಈ ಕುರಿತಂತೆ www.udayasaakshi.com ನ್ಯೂಸ್ ವೆಬ್’ಸೈಟ್ ಫೆ. 23 ರ ಬೆಳಿಗ್ಗೆ ಪ್ರಯಾಣಿಕರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ವರದಿ ಪ್ರಕಟಿಸಿತ್ತು. ರೈಲ್ವೆ ಇಲಾಖೆಯ ಗಮನ ಸೆಳೆಯುವ ಕಾರ್ಯ ನಡೆಸಿತ್ತು.

‘ವರದಿ ಪ್ರಕಟಗೊಂಡ ಕೆಲ ಕೆಲ ಗಂಟೆಗಳಲ್ಲಿಯೇ ರೈಲ್ವೆ ಇಲಾಖೆಯು ಊಟ, ತಿಂಡಿ, ಟೀ, ಕಾಫಿ ಮತ್ತೀತರ ಪಾನೀಯಗಳ ಮಾರಾಟದ ವ್ಯವಸ್ಥೆ ಮಾಡಿದೆ. ಇದರಿಂದ ನೂರಾರು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. www.udayasaakshi.com ನ್ಯೂಸ್ ವೆಬ್’ಸೈಟ್ ಜನಪರ ಕಾಳಜಿಯ ವರದಿಗೆ ಧನ್ಯವಾದ ಅರ್ಪಿಸುವುದಾಗಿ’ ಎಂದು ಸದರಿ ರೈಲಿನಲ್ಲಿ ಕುಂಭಮೇಳಕ್ಕೆ ತೆರಳುತ್ತಿರುವ ಶಿವಮೊಗ್ಗ ನಗರದ ನಿವಾಸಿಯಾದ, ಸಿನಿಮಾ – ಧಾರವಾಹಿ ಕಲಾವಿದರೂ ಆದ ಪ್ರಸನ್ನ ಎನ್ ಜಿ ವಿ ಅವರು ಫೆ. 24 ರ ಬೆಳಿಗ್ಗೆ  ತಿಳಿಸಿದ್ದಾರೆ.

ವಿಳಂಬ : ಪೂರ್ವ ನಿರ್ಧರಿತ ಸಮಯದಂತೆ ಸದರಿ ರೈಲು ಫೆ. 24 ರ ಬೆಳಿಗ್ಗೆ 11. 10 ಕ್ಕೆ ಪ್ರಯಾಗ್ ರಾಜ್ ತಲುಪಬೇಕಾಗಿತ್ತು. ಆದರೆ ಸದ್ಯದ ಮಾಹಿತಿ ಅನುಸಾರ ಸಂಜೆ 6 ಗಂಟೆ ವೇಳೆಗೆ ಪ್ರಯಾಗ್ ರಾಜ್ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಸರಿಸುಮಾರು 8 ರಿಂದ 9 ಗಂಟೆಯಷ್ಟು ವಿಳಂಬವಾಗಲಿದೆ. ಫೆ. 25 ರ ಬೆಳಿಗ್ಗೆ 5. 40 ಕ್ಕೆ ಪ್ರಯಾಗ್ ರಾಜ್  ನಿಂದ ಶಿವಮೊಗ್ಗಕ್ಕೆ ಹೊರಡಲಿರುವ ರೈಲಿನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಬೇಕು. ಅದೇ ದಿನ ಸಂಜೆ 4 ಗಂಟೆ ಮೇಲ್ಪಟ್ಟು ಶಿವಮೊಗ್ಗಕ್ಕೆ ಹೊರಡುವ ವ್ಯವಸ್ಥೆ ಮಾಡಬೇಕು.

ಇದರಿಂದ ಸದರಿ ರೈಲಿನಲ್ಲಿ ಪ್ರಯಾಣಿಸಿ, ಅದೇ ರೈಲಿನಲ್ಲಿ ಶಿವಮೊಗ್ಗಕ್ಕೆ ಹಿಂದಿರುಗುವ ಯೋಜನೆ ಮಾಡಿಕೊಂಡಿರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಸನ್ನ ಎನ್ ಜಿ ವಿ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

Shimoga, Feb 24: In the Shimoga – Banaras special train of Prayag’raj Kumbh Mela, hundreds of passengers who were in trouble due to the unavailability of catering, finally got a catering system in the train!

Railway passengers traveling to Kumbh Mela in the said train have informed that the railway department has made a system of selling lunch, snacks, tea, coffee and other snacks in the train from the afternoon of February 23.

Due to the non-availability of catering system in the train, catering was very difficult. Some passengers went on a fast. In this regard, the website www.udayasaakshi.com published a report on the plight of passengers on the morning of February 23. The work was done to attract the attention of the Railway Department.

india vs pakistan | Cricket: Great victory for India against Pakistan! india vs pakistan | ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ! Previous post india vs pakistan | ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!
Shimoga: Gas cylinder exploded while making sambar - collapsed house! shimoga | ಶಿವಮೊಗ್ಗ : ಸಾಂಬಾರ್ ಮಾಡುವ ವೇಳೆ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್ – ಕುಸಿದು ಬಿದ್ದ ಮನೆ! Next post shimoga | ಶಿವಮೊಗ್ಗ : ಸಾಂಬಾರ್ ಮಾಡುವ ವೇಳೆ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್ – ಕುಸಿದು ಬಿದ್ದ ಮನೆ ಗೋಡೆಗಳು!