
shimoga | ಶಿವಮೊಗ್ಗ ನಗರದ ವಿವಿಧೆಡೆ ಆ.22, 23 ರಂದು ವಿದ್ಯುತ್ ವ್ಯತ್ಯಯ
ಆ. 22 ರಂದು ಅಶೋಕ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಶಿವಮೊಗ್ಗ (shimoga), ಆಗಸ್ಟ್ 21: ಶಿವಮೊಗ್ಗ ನಗರದ ಭರಮಪ್ಪ ನಗರದಲ್ಲಿ ಆಗಸ್ಟ್ 22 ರಂದು ವಿದ್ಯುತ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 22 ರಂದು ಅಶೋಕ ರಸ್ತೆ, ಎಸ್ ಪಿ ಎಂ ರಸ್ತೆ, ವಿನಾಯಕ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಗಾಡಿಕೊಪ್ಪ, ಮಲ್ಲಿಗೇನಹಳ್ಳಿ ಸುತ್ತಮುತ್ತ ಆ. 23 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ (shivamogga), ಆಗಸ್ಟ್ 21: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-04 ರಲ್ಲಿ, ಆಗಸ್ಟ್ 23 ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆ. 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಅಮೃತ ಲೇಔಟ್, ಸಿಟಿ ಕ್ಲಬ್, ಮಹೇಂದ್ರ ಶೋ ರೂಂ ಮುಖ್ಯರಸ್ತೆ, ಗಾಡಿಕೊಪ್ಪ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫರ್ನ್ ಹೋಟೆಲ್ ಸುತ್ತಮುತ್ತ,
ಮಲ್ಲಿಗೇನಹಳ್ಳಿ, ಎಬಿವಿಪಿ ಲೇಔಟ್, ಮ್ಯಾಕ್ಷ್ ಅರುಣೋದಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Amrutha Layout, City Club, Mahendra Showroom Main Road, Gadikoppa, Sharavathi Dental College, Harsha Fern Hotel Surroundings, Malligenahalli, ABVP Layout, Maxx Arunodaya Layout.