Shivamogga : State highway asphalting begins ಶಿವಮೊಗ್ಗ : ರಾಜ್ಯ ಹೆದ್ದಾರಿ ಡಾಂಬರೀಕರಣಕ್ಕೆ ಚಾಲನೆ

shimoga news | ಶಿವಮೊಗ್ಗ : ರಾಜ್ಯ ಹೆದ್ದಾರಿ ಡಾಂಬರೀಕರಣಕ್ಕೆ ಚಾಲನೆ

ಶಿವಮೊಗ್ಗ (shivamogga), ಜನವರಿ 10: ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ರಾಜ್ಯ ಹೆದ್ದಾರಿ – 254 ರ ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆಯ ಡಾಂಬರೀಕರಣ ಕಾರ್ಯಕ್ಕೆ ಪಿಡಬ್ಲ್ಯೂಡಿ ವಿಶೇಷ ವಿಭಾಗ ಚಾಲನೆ ನೀಡಿದೆ.

ದೇವರಾಜ ಅರಸು ಬಡಾವಣೆಯ ಫ್ಲೈ ಓವರ್ ಸಮೀಪದಿಂದ ಡಾಂಬರೀಕರಣ ಆರಂಭಿಸಲಾಗಿದೆ. ಶಾರದಮ್ಮ ಲೇಔಟ್, ಸಹ್ಯಾದ್ರಿ ನಗರ, ಜೆ ಹೆಚ್ ಪಟೇಲ್ ಬಡಾವಣೆ, ಸೋಮಿನಕೊಪ್ಪದವರೆಗೆ ಡಾಂಬರೀಕರಣ ಕಾರ್ಯ ನಡೆಸಲಾಗುತ್ತಿದೆ. ಶನಿವಾರ ಪಿಡಬ್ಲ್ಯೂಡಿ ಎಂಜಿನಿಯರ್ ಕೃಷ್ಣಾರೆಡ್ಡಿ ಮೊದಲಾದವರು ಸ್ಥಳದಲ್ಲಿದ್ದು ಡಾಂಬರೀಕರಣ ಕಾರ್ಯದ ಪರಿವೀಕ್ಷಣೆ ಮಾಡಿದರು.

ಇದೇ ವೇಳೆ ಸಹ್ಯಾದ್ರಿ ನಗರದ ಸೇತುವೆ ಬಳಿಯ ತಿರುವಿನಲ್ಲಿ ಹೆದ್ದಾರಿಯ ಅಗಲೀಕರಣ ಕಾರ್ಯ ಕೂಡ ನಡೆಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಭೂ ಸ್ವಾದೀನ ಸಮಸ್ಯೆ ಗೊಂದಲದಿಂದ, ಸದರಿ ಪ್ರದೇಶದಲ್ಲಿ ರಸ್ತೆ ಕಿರಿದಾಗಿತ್ತು. ಜನ – ವಾಹನ ಸಂಚಾರ ದುಸ್ತರವಾಗಿತ್ತು.

ಇದೀಗ ಸುಮಾರು 90 ಮೀಟರ್ ಉದ್ದದ ಹೆದ್ದಾರಿ ಅಗಲೀಕರಣಗೊಳಿಸಲಾಗುತ್ತಿದೆ. ರಸ್ತೆ ನಡುವೆ ಮೀಡಿಯನ್ ರಚಿಸಲಾಗುತ್ತದೆ. ಸುಗಮ ವಾಹನ ಸಂಚಾರಕ್ಕೆ ಪಿಡಬ್ಲ್ಯೂಡಿ ಇಲಾಖೆ ಕ್ರಮಕೈಗೊಂಡಿದೆ.

*** ಸದರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಸರಕುಸಾಗಾಣೆ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಫ್ಲೈ ಓವರ್, ಸೋಮಿನಕೊಪ್ಪ ಸರ್ಕಲ್, ಪ್ರೆಸ್ ಕಾಲೋನಿ ಬಸ್ ನಿಲ್ದಾಣದ ಸಮೀಪ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಸೂಚನಾ ಫಲಕ ಅಳವಡಿಕೆ, ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಲೈಟ್ ಗಳ ಅಳವಡಿಕೆ ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಪಿಡಬ್ಲ್ಯೂಡಿ ಎಂಜಿನಿಯರ್ ಕೃಷ್ಣಾರೆಡ್ಡಿ ಅವರಿಗೆ ಪತ್ರಕರ್ತ ಬಿ ರೇಣುಕೇಶ್ ಅವರು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

Shivamogga, January 10: The PWD special department has launched the asphalting work of about one and a half km long road on State Highway – 254 under the jurisdiction of Shivamogga Corporation. “Asphalting work has started near the flyover at Devaraj Arasu Layout. The work is being carried out up to Sahyadri Nagar, J.H. Patel Layout, and Sominakoppa. On Saturday, PWD engineer Krishnareddy and others were present at the site to inspect the asphalting work.”

Hosanagar: Biker dies on the spot in road accident! ಹೊಸನಗರ : ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು! Previous post shimoga | hosanagara news | ಹೊಸನಗರ : ರಸ್ತೆಯಲ್ಲಿ ತೆಗೆದ ಗುಂಡಿಗೆ ಬಿದ್ದು ಬೈಕ್ ಸವಾರ ಸಾ**ವು!
shimoga APMC vegetable prices | Details of vegetable prices for january 30 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜನವರಿ 11 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜನವರಿ 11 ರ ತರಕಾರಿ ಬೆಲೆಗಳ ವಿವರ