shimoga news | ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

Shivamogga: Harassment Accused Taken into Custody by ‘Akka Pade’ ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

ಶಿವಮೊಗ್ಗ (shivamogga), ಮಾರ್ಚ್ 03: ಯುವತಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವನನ್ನು ‘ಅಕ್ಕ ಪಡೆ’ ಪೊಲೀಸರು ವಶಕ್ಕೆ ಪಡೆದ ಘಟನೆ ಮಾರ್ಚ್ 02 ರಂದು ಶಿವಮೊಗ್ಗದ ಕೆಎಸ್ಆರ್’ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

‘ಅಕ್ಕ ಪಡೆ’ ಸಿಬ್ಬಂದಿಗಳು ಬಸ್ ನಿಲ್ದಾಣ ಆವರಣದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ, ಯುವತಿಯೋರ್ವಳು ಅಳುತ್ತಾ ನಿಂತಿರುವುದನ್ನು ಗಮನಿಸಿದ್ದಾರೆ.

ಯುವತಿ ಬಳಿ ತೆರಳಿ ಸಿಬ್ಬಂದಿಗಳು ವಿಚಾರಿಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ತೊಂದರೆ ಕೊಡುತ್ತಿರುವ ಮಾಹಿತಿ ತಿಳಿಸಿದ್ದಾಳೆ. ತಕ್ಷಣವೇ ಸದರಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಲಘು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾರ್ಚ್ 03 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shivamogga: Harassment Accused Taken into Custody by ‘Akka Pade’

Shivamogga, March 03 : An incident occurred on March 02 at the KSRTC bus stand in Shivamogga, where a young man harassing a young woman was taken into custody by the ‘Akka Pade’ police unit.

While patrolling the bus stand premises, members of the ‘Akka Pade’ noticed a young woman standing and crying. They approached her and inquired about the situation. She informed them that a man was troubling her.

Immediately, the accused was taken into custody. He was brought to the women’s police station for questioning. A minor case was registered, and after issuing a warning, the accused was released, according to a press note issued by the police department on March 03.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *