ಶಿವಮೊಗ್ಗ (shivamogga), ಮಾರ್ಚ್ 07: ಫೇಸ್’ಬುಕ್ ಖಾತೆಯಲ್ಲಿ ವ್ಯಕ್ತಿಯೋರ್ವರ ಖಾಸಗಿ ವಿಡಿಯೋ ಅಪ್’ಲೋಡ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಿವಮೊಗ್ಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರದ ನಿವಾಸಿ, ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ ಸೀಮಾ ಜೂಲಿಯನ್ ಸೆರಾವೋ (45) ಹಾಗೂ ಬೆಂಗಳೂರಿನ ದಾಸನಪುರ ನಿವಾಸಿ, ವ್ಯವಹಾರ ವೃತ್ತಿಯ ಸಿ ಜೆ ನಿಶಾಂತ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಾರ್ಚ್ 07 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಏನೀದು ಪ್ರಕರಣ? : 5-02-2026 ರಂದು ದೂರುದಾರರೋರ್ವರ (ವಿವರ ಬಹಿರಂಪಡಿಸಿಲ್ಲ) ಖಾಸಗಿ ವಿಡಿಯೋವೊಂದನ್ನು ಅಪರಿಚಿತರು ಫೇಸ್’ಬುಕ್ ನಲ್ಲಿ ಅಪ್’ಲೋಡ್ ಮಾಡಿದ್ದರು. ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಎಸ್ಪಿ ನಿಖಿಲ್ ಬಿ ಅವರು ಸೈಬರ್ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು.
ಪೊಲೀಸ್ ಇಲಾಖೆ ಎಚ್ಚರಿಕೆಯೇನು?
*** ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವ್ಯಕ್ತಿಯ ಮಾನಕ್ಕೆ ಕುಂದು ತರುವ ಪೋಟೋ, ವಿಡಿಯೋ ಹಾಗೂ ಸಾಹಿತ್ಯವನ್ನು ಪ್ರಕಟಿಸುವುದು ಅಪರಾಧವಾಗಿದೆ. ಈ ರೀತಿಯ ಕೃತ್ಯಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.
Private Video Uploaded on Facebook Account : Beautician Among Two Arrested!
Shivamogga, March 07: In connection with the allegation of uploading a private video of an individual on Facebook, two people have been arrested by the Shivamogga Cyber Crime Police Station.
The accused have been identified as Seema Julian Serrao (45), a beautician from Hosanagar in Shivamogga district, and C. J. Nishanth (29), a businessman from Dasanapura, Bengaluru.
A case has been registered against both, and they have been remanded to judicial custody. Police stated in a press release on March 07 that efforts are underway to trace other accused involved in the case.
What is the case? On February 5, 2026, an unknown person uploaded a private video of the complainant (details withheld) on Facebook. Following this, a case was registered at the Cyber Crime Police Station. For investigation, SP Nikhil B formed a special police team under the leadership of Cyber Police Station Inspector Manjunath.
Police Department’s Warning: Publishing any photo, video, or written content on social media that harms a person’s dignity is a crime. Such acts are punishable under the Information Technology Act, the police department has cautioned.

