bengaluru news | ಸಿಎಂ ಬದಲಾವಣೆ ಚರ್ಚೆ : ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಸಿದ್ದರಾಮಯ್ಯ?

Discussion on CM Change : Did Siddaramaiah Seek Time to Meet the Governor? ಸಿಎಂ ಬದಲಾವಣೆ ಚರ್ಚೆ : ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಸಿದ್ದರಾಮಯ್ಯ?

ಬೆಂಗಳೂರು (bangalore), ಮೇ 27: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಗಳು  ಗರಿಗೆದರಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28 ರಂದು ಪದತ್ಯಾಗ ಮಾಡುವ ಸಾಧ್ಯತೆಗಳು ದಟ್ಟವಾಗುತ್ತಿವೆ.

ಪಕ್ಷದ ವರಿಷ್ಠರ ಆದೇಶ ಪರಿಪಾಲನೆಗೆ ಮುಂದಾಗಿರುವ ಸಿದ್ದರಾಮಯ್ಯ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ ಎನ್ನಲಾಗುತ್ತಿದೆ.

ಮೇ 28 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಈ ವೇಳೆ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯ ಅವರು ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಹುತೇಕ ನಾಳೆ ಬೆಳಿಗ್ಗೆ ಅವರ ರಾಜೀನಾಮೆ ನಿರ್ಧಾರ ಅದಿಕೃತವಾಗಿ ಸ್ಪಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ಒತ್ತಡ : ಮತ್ತೊಂದೆಡೆ, ಸಿದ್ದರಾಮಯ್ಯ ಆಪ್ತರು ಹೈಕಮಾಂಡ್ ಸೂಚನೆಗೆ ಅಸಮಾಧಾನಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ,  ಡಿ ಕೆ ಶಿವಕುಮಾರ್ ಅವರು ನಾಳೆ ಬೆಳಿಗ್ಗೆ ಬೆಂಗಳೂರಿನ ‘ಕಾವೇರಿ’ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಉಪಹಾರ ಸಭೆ ನಡೆಸಲಿದ್ದಾರೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ.

Discussion on CM Change: Did Siddaramaiah Seek Time to Meet the Governor?

Bengaluru, May 27: Speculation about a change in leadership in the state has intensified. There are strong possibilities that Chief Minister Siddaramaiah may resign on May 28.

It is being said that Siddaramaiah, who is ready to follow the orders of the party high command, might step down from the CM post. In this context, he has reportedly sought time to meet the Governor tomorrow.

He has requested an appointment with Governor Thawar Chand Gehlot on May 28. During this meeting, Siddaramaiah is expected to submit his resignation letter to the Governor. Most likely, his decision to resign will become officially clear tomorrow morning.

Pressure: On the other hand, Siddaramaiah’s close associates are unhappy with the high command’s instructions. They have started pressuring him not to resign from the CM post under any circumstances.

Meanwhile, DK Shivakumar is scheduled to have a breakfast meeting with Siddaramaiah tomorrow morning at the official residence ‘Kaveri’ in Bengaluru. This has sparked considerable curiosity.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *