ಶಿವಮೊಗ್ಗ, ಜೂನ್ 09: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗುವ ಸೂಕ್ಷ್ಮ ಪ್ರದೇಶ ಹಾಗೂ ಇತರೆ ಕಾರಣಗಳಿಂದ ಸಂಭವಿಸಬಹುದಾದ ಅನಾಹುತಗಳನ್ನು ತುರ್ತಾಗಿ ನಿರ್ವಹಿಸಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿ ನೌಕರರನ್ನು ಒಳಗೊಂಡ ನಿರ್ವಹಣಾ ತಂಡಗಳನ್ನು ರಚಿಸಿಸಲಾಗಿದೆ. ಸದರಿ ಕೇಂದ್ರ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ.
ಸಾರ್ವಜನಿಕರು ಯಾವುದೇ ಅನಾಹುತ ಅಥವಾ ತುರ್ತು ಸಹಾಯ ಬೇಕಾದಲ್ಲಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 1800-4257677 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಆಯುಕ್ತರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Shivamogga Municipal Corporation launches helpline for flood emergency management
Shivamogga, June 09: A helpline center has been opened to urgently manage the sensitive areas affected by flood and other disasters that may occur due to other reasons within the limits of the Shivamogga Municipal Corporation.
Management teams consisting of officers/staff employees on duty in the corporation have been formed. The center will function 24 hours a day.
In case of any disaster or emergency, the public can call the corporation’s helpline number 1800-4257677 and provide information, the Deputy Commissioner (Administration) of the Shivamogga Municipal Corporation has said in a statement.

