ಶಿವಮೊಗ್ಗ (shivamogga), ಜೂನ್ 19: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ನ ಶಿವಮೊಗ್ಗ ನಗರದ ಪುರಾಣಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರನ್ನಾಗಿ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ, ಹೊಸಮನೆ ಬಡಾವಣೆ ಮಾಜಿ ಕಾರ್ಪೋರೇಟರ್, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ಸುತ್ತಿರುವ ರೇಖಾ ರಂಗನಾಥ್ ರವರನ್ನು ಮೂರು ವರ್ಷಗಳ ಅವಧಿಗೆ ರಾಜ್ಯ ಸರ್ಕಾರ ನೇಮಿಸಿ ಆದೇಶಿಸಿದೆ.
ವ್ಯವಸ್ಥಾಪನ ಸಮಿತಿಗೆ ನೇಮಕ ಮಾಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರುಗಳು ಹಾಗೂ ಸಹಕಾರ ನೀಡಿದ ರಾಜ್ಯ ಮತ್ತು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರುಗಳಿಗೆ ಕೃತಜ್ಞತೆ ಅರ್ಪಿಸುವುದಾಗಿ ರೇಖಾ ರಂಗನಾಥ್ ಅವರು ಜೂನ್ 19 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Shivamogga Fort Anjaneya Temple : Rekha Ranganath appointed as Management Committee member
Shivamogga, June 19: The State Government’s Hindu Religious Endowment Department, through the District Religious Council, has appointed former opposition leader of the City Corporation, ex-councillor of Hosamane Layout, and active member of several organizations, Rekha Ranganath, as a new member of the management committee of the historic Fort Sri Seetharamanjaneya Temple in Shivamogga. She has been appointed for a three-year term by government order.
In a press release issued on June 19, Rekha Ranganath expressed gratitude to the Chief Minister, Deputy Chief Minister, Ministers, and all Congress leaders at the state and district levels who supported her appointment.

