shimoga raid news | ನಾಗರಿಕರಿಗೆ ವಂಚನೆ : ರಿಯಲ್ ಎಸ್ಟೇಟ್ ಕಚೇರಿ ಮೇಲೆ ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರ ದಾಳಿ!

Tunganagara Police Station

ಶಿವಮೊಗ್ಗ (shivamogga), ಆಗಸ್ಟ್ 06: ನಾಗರಿಕರಿಗೆ ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದಾಗಿ ಹಾಗೂ ಮನೆ ಕಟ್ಟಲು ಕಡಿಮೆ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಚೇರಿಯೊಂದರ ಮೇಲೆ, ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ ಘಟನೆ ಆಗಸ್ಟ್ 06 ರಂದು ನಡೆದಿದೆ.

ಗೋಪಾಲಗೌಡ ಬಡಾವಣೆಯಲ್ಲಿ ಸದರಿ ಕಚೇರಿ ಕಾರ್ಯನಿರ್ವಹಣೆ ಮಾಡುತ್ತಿತ್ತು. ಸದರಿ ಕಚೇರಿ ವಿರುದ್ದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ವಂಚನೆ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯದಿಂದ ಶೋಧ ಕಾರ್ಯಾಚರಣೆಯ ವಾರೆಂಟ್ ಪಡೆದು ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Fraud Against Citizens: Shimoga Tunga Nagar Police Raid Real Estate Office | Shimoga, August 06 – A shocking incident unfolded when police from Shimoga’s Tunga Nagar station raided the office of a builders and developers firm on August 06. The company had allegedly lured citizens by promising to build houses at low cost and arrange loans at cheaper rates. After collecting money under these false assurances, they were accused of cheating the public. Police carried out the raid on the real estate office as part of the investigation into the fraudulent activities.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *