ಶಿವಮೊಗ್ಗ (shivamogga), ಆಗಸ್ಟ್ 30: ನೂತನ ಉಪವಿಭಾಗ ಅಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡವು ಆಗಸ್ಟ್ 30 ರಂದು ಶಿವಮೊಗ್ಗ ನಗರದ ಕೆಲ ಹೋಟೆಲ್, ಸರ್ಕಾರಿ ಹಾಸ್ಟೆಲ್ ಗಳಿಗೆ ದಿಡೀರ್ ಭೇಟಿಯಿತ್ತು ತಪಾಸಣೆ ನಡೆಸಿತು.
ಆಹಾರ ಸುರಕ್ಷತೆ ,ಸ್ವಚ್ಛತೆ ಹಾಗೂ ನೈರ್ಮಲಕ್ಕೆ ಸಂಬಂಧಿಸಿದ ಲೋಪದೋಷಗಳ ಪತ್ತೆಗಾಗಿ ದಿಡೀರ್ ಭೇಟಿಯಿತ್ತು ತಪಾಸಣೆ ನಡೆಸಿದೆ. ಆಹಾರ ಸುರಕ್ಷಿತ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸುವಂತೆ ಹೋಟೆಲ್ ಮತ್ತು ಹಾಸ್ಟೆಲ್ ಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ.
ಅವಧಿ ಮೀರಿದ ಮತ್ತು ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ ಅವುಗಳ ತಯಾರಿಕೆ ಅಥವಾ ಮಾರಾಟದಲ್ಲಿ ಬಳಕೆ ಆಗದಂತೆ ಸೂಕ್ತ ರೀತಿಯ ವಿಲೇವಾರಿ ಮಾಡಬೇಕು. ಸೂಕ್ತ ತಾಪಮಾನದಲ್ಲಿ ಸ್ವಚ್ಛ ಹಾಗೂ ಆಹಾರ ಸುರಕ್ಷಿತ ಕಂಟೇನರ್ ಗಳಲ್ಲಿ ಸಂಗ್ರಹಿಸಬೇಕು.
ಮತ್ತು ಅಡುಗೆ ಮನೆ ಆಹಾರ ತಯಾರಿಕ ಸ್ಥಳ ಸಂಗ್ರಹಣ ಪ್ರದೇಶ ಗಳನ್ನು ಸ್ವಚ್ಛ ಮತ್ತು ಶುಷ್ಕ ವಾತಾವರಣದಲ್ಲಿ ನಿರ್ವಹಿಸಬೇಕು. ಹಾಲು, ಮಾಂಸ, ಮೊಟ್ಟೆ ಮತ್ತು ಸಿದ್ಧ ಆಹಾರಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು.
ರೆಫ್ರಿಜರೇಟರ್ ಕೂಲರ್ ಹಾಗೂ ಇತರೆ ತಾಪಮಾನ ನಿಯಂತ್ರಣ ಸಾಧನಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆಹಾರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಉಪ ವಿಭಾಗಾಧಿಕಾರಿಗಳು ಸೂಚಿಸಿದ್ದಾರೆ.
ಆಹಾರ ನಿರ್ವಹಿಸುವ ಸಿಬ್ಬಂದಿ ಅವರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಜೊತೆಗೆ ಸುರಕ್ಷಿತ ಆಹಾರ ನಿರ್ವಹಣಾ ವಿಧಾನಗಳ ಕುರಿತು ಅಗತ್ಯ ತರಬೇತಿಯನ್ನು ನೀಡಬೇಕು. ತಪಾಸಣಾ ಸಮಯದಲ್ಲಿ ಕಂಡು ಬಂದ ಲೋಪ ದೋಷಗಳನ್ನು ಹತ್ತು ದಿನದೊಳಗೆ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷಿತ ಮಾನದಂಡಗಳ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ ಎಸ್ ರಾಜೀವ್, ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.
Shivamogga, August 30: A team of officers led by the new Sub-Divisional Officer Dr. Maitri conducted a surprise visit to some hotels and government hostels in Shivamogga city on August 30 and inspected them. The surprise visit was conducted to find out the shortcomings related to food safety, cleanliness and sanitation. The heads of the hotels and hostels have been instructed to strictly follow the food safety rules.

