shimoga news | ಶಿವಮೊಗ್ಗ : ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿ – ಆಹಾರದ ಗುಣಮಟ್ಟ ಪರಿಶೀಲನೆ!

Shivamogga: Sudden visit to food courts – Food quality check! | Shivamogga, September 01: Recently, a team of officers led by Sub-Divisional Officer (AC) Dr. Maitri who had conducted a sudden visit to hotels, bakeries and government hostels in Shivamogga city inspected the quality of food On September 01, a sudden visit was made to the food courts in the city.

ಶಿವಮೊಗ್ಗ (shivanogga), ಸೆಪ್ಟೆಂಬರ್ 01:ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಹೋಟೆಲ್, ಬೇಕರಿ, ಸರ್ಕಾರಿ ಹಾಸ್ಟೆಲ್ ಗಳಗೆ ದಿಡೀರ್ ಭೇಟಿಯಿತ್ತು ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ್ದ ಉಪ ವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿ ತಂಡವು, ಸೆಪ್ಟೆಂಬರ್ 01 ರಂದು ನಗರದ ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿತು.

ಗೋಪಿ ಸರ್ಕಲ್ ಸಮೀಪದ ಮಲ್ಲಿಕಾರ್ಜುನ ಚಿತ್ರಮಂದಿರ ಪಕ್ಕದ ಸಸ್ಯಹಾರಿ ಫುಡ್ ಕೋರ್ಟ್ ಹಾಗೂ ಸವಾರ್ ಲೈನ್ ರಸ್ತೆಯ ನಾನ್’ವೆಜ್ ಫುಡ್’ಕೋರ್ಟ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಹೆಲ್ತ್ ಇನ್ಸ್’ಪೆಕ್ಟರ್ ಬಸವರಾಜ್, ತಹಶೀಲ್ದಾರ್ ಕಚೇರಿ ಆರ್’ಐ ಸತೀಶ್, ಗ್ರಾಮ ಆಡಳಿತಾಧಿಕಾರಿಗಳಾದ ದೊಡ್ಡಬಸಪ್ಪ ರೆಡ್ಡಿ, ದೀಪಕ್, ಸಿಬ್ಬಂದಿ ಚೇತನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸೂಚನೆ : ಆಹಾರ ತಯಾರಿಕೆ ವೇಳೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ, ಆರೋಗ್ಯಕ್ಕೆ ಹಾನಿಕಾರಕವಾದ, ನಿಷೇಧಿತ ರಾಸಾಯನಿಕಗಳನ್ನ ಆಹಾರ ತಯಾರಿಕೆ ವೇಳೆ ಬಳಕೆ ಮಾಡಬಾರದು. ಅಸ್ವಚ್ಛತೆ ಇರಬಾರದು. ನಿಗದಿತ ಗುಣಮಟ್ಟದ ಅಡುಗೆ ಎಣ್ಣೆ ಬಳಸುವುದು ಸೇರಿದಂತೆ ಹಲವು ಸಲಹೆ – ಸೂಚನೆಗಳನ್ನು ವ್ಯಾಪಾರಿಗಳಿಗೆ ಅಧಿಕಾರಿಗಳ ತಂಡ ನೀಡಿತು.

ಇದೆ ವೇಳೆ ಕೆಲ ವ್ಯಾಪಾರಿಗಳು ತಯಾರಿಸಿದ್ದ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿದ ಅಧಿಕಾರಿಗಳ ತಂಡ, ಪ್ರಯೋಗಾಲಯದ ತಪಾಸಣೆಗೆ ಕೊಂಡೊಯ್ದಿತು.

ಮಾರ್ಗಸೂಚಿ ಪಾಲಿಸಲು ಸೂಚನೆ : ಎಸಿ ಡಾ. ಮೈತ್ರಿ

*** ಆಹಾರದ ಗುಣಮಟ್ಟ ಪರಿಶೀಲನೆ ಉದ್ದೇಶದಿಂದ ಕಳೆದ ಕೆಲ ದಿನಗಳಿಂದ ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲನೆ ನಡೆಸಲಾಗುತ್ತಿದೆ. ಆಹಾರದ ಗುಣಮಟ್ಟ ಪರಿಶೀಲನೆ ಜೊತೆಗೆ ನಿಯಮಗಳ ಪಾಲನೆ ಮಾಡಲಾಗುತ್ತಿದೆಯೇ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಭೇಟಿಯ ವೇಳೆ ಕಂಡುಬರುವ ಲೋಪದೋಷಗಳ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.

Shivamogga: Sudden visit to food courts – Food quality check! | Shivamogga, September 01: Recently, a team of officers led by Sub-Divisional Officer (AC) Dr. Maitri, who had conducted a sudden visit to hotels, bakeries and government hostels in Shivamogga city, inspected the quality of food. On September 01, a sudden visit was made to the food courts in the city.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *