ಶಿವಮೊಗ್ಗ, ಆಗಸ್ಟ್ 02: ‘ನನ್ನಂತ ಬಡ, ಕೂಲಿ ಕಾರ್ಮಿಕನ ಮಗ ದೇಶದ ತೆರಿಗೆದಾರನಾಗಿದ್ದೆನೆ. ಇದಕ್ಕೆ ಕಾರಣವಾಗಿದ್ದು ಸಂವಿಧಾನವಾಗಿದೆ’ ಎಂದು ಶಿವಮೊಗ್ಗ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊರವಲಯ ಶೋಭಾ ಬಡಾವಣೆಯಲ್ಲಿ ಆಗಸ್ಟ್ 02 ರಂದು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಆಯೋಜಿಸಲಾಗಿದ್ದ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾರು ಮಾಡಲಾಗದ ಕೆಲಸವನ್ನು ಯಾವ ವರ್ಗ ಮಾಡುತ್ತದೆಯೋ, ಅದೇ ಶ್ರೇಷ್ಠವಾದ ವರ್ಗವಾಗಿದೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತು ಅಕ್ಷರಶಃ ಸತ್ಯವಾಗಿದೆ. ಹಾಗೆಯೇ ಸಂವಿಧಾನ ಕೂಡ ಸರ್ವರನ್ನು ಸಮಾನರಾಗಿ ನೋಡಬೇಕು ಎಂದು ಹೇಳಿದೆ. ಪೌರ ಕಾರ್ಮಿಕರ ಕಾರ್ಯ ಶ್ರೇಷ್ಠವಾದುದು ಎಂದು ಅಭಿಪ್ರಾಯಪಟ್ಟರು.
ಅಭಿವೃದ್ದಿ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಪರಿಸರ ನಾಶವಾಗಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯ, ಹಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತದಂತಹ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ನಾವು ಪರಿಸರಕ್ಕೆ ಏನು ಕೊಡುತ್ತೆವೆಯೋ ಅದು ನಮಗೆ ವಾಪಾಸ್ ದೊರಕುತ್ತದೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಪ್ರದೇಶಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಮಹಿಳಾ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ನಿವಾಸಿಗಳ ಕಾರ್ಯ ಅಭಿನಂದನೀಯ. ಹಾಗೆಯೇ ಪರಸರ ಸಂರಕ್ಷಣೆಗೆ ಕೈಜೋಡಿಸಿರುವುದು ಸ್ವಾಗತಾರ್ಹ ಎಂದು ಇಓ ಪರಮೇಶ್ವರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು ಮಾತನಾಡಿ, ‘ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜ ಪ್ರಗತಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಸಮ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಚಿತ್ತ ಹರಿಸೋಣ’ ಎಂದು ಕರೆ ನೀಡಿದರು.
ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ರಾಜಪ್ಪ ಹೆಚ್ ಅವರು ಮಾತನಾಡಿ, ‘ಆಡಳಿತ ಹಾಗೂ ನಾಗರಿಕರ ಸಹಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯವಾಗಲಿದೆ. ಸಮಾಜಮುಖಿ ಕಾರ್ಯಗಳನ್ನು ನಿವಾಸಿಗಳು ಮಾಡುತ್ತಿರುವುದು ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರ ಬರಹಗಾರರ ಸಂಘದ ಅಧ್ಯಕ್ಷರಾದ ಜಿ ಎಂ ಸುರೇಶ್ ಬಾಬು, ಸಮಾಜ ಸೇವಕರಾದ ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ಹಾಗೂ ನಿವಾಸಿಗಳ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರಪ್ಪ ಅವರು ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಪಾಲಿಕೆ ಮೇಸ್ತಿ ನೇತ್ರಾವತಿ, ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಹಿರಿಯ ಮುಖಂಡರಾದ ಕೊಟ್ರೇಶಪ್ಪ, ನಿವಾಸಿಗಳಾದ ಷಡಾಕ್ಷರಿ, ಪಾಟೀಲ್, ಜಯಮ್ಮ, ಬಸಪ್ಪ, ನಾಗರತ್ನ, ಯುವ ಮುಖಂಡ ಮೇಸ್ತ್ರಿ ನಾಗರಾಜ್ ನಾಯ್ಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
“The Constitution Enabled a Poor Laborer’s Son Like Me to Rise” – Shivamogga Taluk Panchayat EO Parameshwar
Shivamogga, August 02: “A poor laborer’s son like me has now become a taxpayer of the nation. The reason behind this is the Constitution,” expressed Taluk Panchayat Executive Officer Parameshwar of Shivamogga.
He was speaking after inaugurating the program organized on August 02 at Shobha Layout on the city’s outskirts by the Residents’ Welfare Association, where women civic workers were honored with the traditional bagina offering and a tree-planting drive was held.

