bhadravati news | ಭದ್ರಾವತಿಯ ಬಾರಂದೂರಿನಲ್ಲಿ ಮೇಕೆ ಕಳವು : ಆರೋಪಿಯ ಬಂಧನ!

Bhadravati, August 03: An incident has come to light where police from Paper Town Station arrested a man accused of stealing goats in Barandooru, Bhadravati.

ಭದ್ರಾವತಿ (bhadravathi), ಆಗಸ್ಟ್ 03: ಭದ್ರಾವತಿಯ ಬಾರಂದೂರಿನಲ್ಲಿ ಮೇಕೆಗಳನ್ನು ಕಳವು ಮಾಡಿದ್ದ ಆರೋಪದ ಮೇರೆಗೆ ಓರ್ವನನ್ನು ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಭದ್ರಾವತಿ ತಾಲೂಕಿನ ತಿಮ್ಲಾಪುರ ತಾಂಡದ ನಿವಾಸಿ ರವಿಕುಮಾರ್ ಯಾನೆ ಕುಂಟ ರವಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 70 ಸಾವಿರ ರೂ. ಮೌಲ್ಯದ 5 ಮೇಕೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾರಂದೂರಿನ ಮನಿಯ ಎಂಬುವರಿಗೆ ಸೇರಿದ 6 ಮೇಕೆಗಳನ್ನು ಇತ್ತೀಚೆಗೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಬ್ ಇನ್ಸ್’ಪೆಕ್ಟರ್ ಕುಮಾರ್ ಎನ್ ಮಾರ್ಗದರ್ಶನದಲ್ಲಿ ಎಎಸ್ಐ ಕುಮಾರ್ ಕ್ರೈಂ ವಿಭಾಗದ ಸಿಬ್ಬಂದಿಗಳಾದ ನಾಗರಾಜ್, ಬಸವರಾಜ್, ಭರತ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Goat Theft in Barandooru, Bhadravati: Accused Arrested! | Bhadravati, August 03: An incident has come to light where police from Paper Town Station arrested a man accused of stealing goats in Barandooru, Bhadravati. The arrested accused has been identified as Ravikumar alias Kunta Ravi, a resident of Timlapura Tanda in Bhadravati taluk. Police recovered 5 goats worth ₹70,000 from him.

Recently, 6 goats belonging to a person named Mani from Barandooru were stolen. A complaint regarding this theft had been registered at Paper Town Police Station. Under the guidance of Sub-Inspector Kumar N, ASI Kumar along with crime division staff members Nagaraj, Basavaraj, and Bharat successfully arrested the accused.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *