shimoga news | ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು!

Shivamogga: Heavy police security for Hindu Mahasabha Ganapathi procession! | Shivamogga, September 24: The district police department has announced that thousands of police personnel are being deployed for security duties during the pre-immersion procession of the Hindu Mahasabha Ganapathi scheduled to take place in Shivamogga city on September 25.

ಶಿವಮೊಗ್ಗ (shivamogga), ಸೆಪ್ಟೆಂಬರ್ 24: ಶಿವಮೊಗ್ಗ ನಗರದಲ್ಲಿ ಸೆಪ್ಟೆಂಬರ್ 25 ರಂದು ನಡೆಯಲಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಗೆ, ಸಾವಿರಾರು ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಈ ಕುರಿತಂತೆ ಸೆಪ್ಟೆಂಬರ್ 24 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 2 ಜನ ಎಸ್ಪಿ, 5 ಹೆಚ್ಚುವರಿ ಎಸ್ಪಿ, 22 ಡಿವೈಎಸ್ಪಿ,  84 ಸಿಪಿಐ, 289 ಪಿಎಸ್ಐ – ಆರ್’ಎಸ್ಐ, 108 ಎಎಸ್ಐ – ಎಆರ್’ಎಸ್ಐ, 2134 ಹೆಚ್.ಸಿ. – ಪಿಸಿ, 600 ಹೋಂ ಗಾರ್ಡ್ ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ.

ಇದರ ಜೊತೆಗೆ 12 ಕೆಎಸ್ಆರ್’ಪಿ, 10 ಡಿಎಆರ್, 2 ಕ್ಯೂಆರ್’ಟಿ, 1 ಡಿ ಸ್ವ್ಯಾಟ್, 2 ಆರ್’ಎಎಫ್, 1 ಎಸ್’ಎಎಫ್, 1 ಎಎಸ್’ಸಿ ಹಾಗೂ 7 ಅಗ್ನಿಶಾಮಕ ದಳ, 4 ಆಂಬುಲೆನ್ಸ್ ತಂಡ ಮೆರವಣಿಗೆಯ ಭದ್ರತೆಗೆ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಉಳಿದಂತೆ ಮೆರವಣಿಗೆಯ ದೃಶ್ಯಾವಳಿ ಸೆರೆ ಹಿಡಿಯಲು 3500 ವಿಡಿಯೋ ಕ್ಯಾಮರಾ ಹಾಗೂ ಸಿಸಿಟಿವಿ ಮತ್ತು 12 ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Shivamogga: Heavy police security for Hindu Mahasabha Ganapathi procession! | Shivamogga, September 24: The district police department has announced that thousands of police personnel are being deployed for security duties during the pre-immersion procession of the Hindu Mahasabha Ganapathi scheduled to take place in Shivamogga city on September 25.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *