ಶಿವಮೊಗ್ಗ : ನಾಡಹಬ್ಬದ ವೇದಿಕೆಯಲ್ಲಿಯೂ ‘ವಂದೇ ಮಾತರಂ’ ಗೀತೆ ರಾಜಕಾರಣ – ನಾಗರಿಕರ ಆಕ್ರೋಶ!

%%title%% %%page%% %%sep%% %%sitename%% Shivamogga: ‘Vande Mataram’ song becomes a political issue even on the state festival stage – Citizens express outrage! | Shivamogga, October 11: Conscious citizens of Shivamogga have expressed outrage over the fact that the stage for the state festival Dasara became the setting for a political dispute between the Congress and the BJP regarding the ‘Vande Mataram’ song. They have voiced their displeasure on social media regarding the conduct of the political leaders.
ವರದಿ : ಬಿ ರೇಣುಕೇಶ್

ಶಿವಮೊಗ್ಗ (shivamogga), ಅಕ್ಟೋಬರ್ 11: ನಾಡಹಬ್ಬ ಹಬ್ಬ ದಸರಾ ವೇದಿಕೆಯು ‘ವಂದೇ ಮಾತರಂ’ ಗೀತೆ ಕುರಿತಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ವಿವಾದಕ್ಕೆ ಆಸ್ಪದವಾಗಿದ್ದಕ್ಕೆ, ಶಿವಮೊಗ್ಗದ ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ನಾಯಕರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಾಯ್ತು? : ಮಹಾನಗರ ಪಾಲಿಕೆ ಆಡಳಿತವು ಅಕ್ಟೋಬರ್ 11 ರಂದು ಕೋಟೆ ದುರ್ಗಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ‘ಶಿವಮೊಗ್ಗ ದಸರಾ – 2026’ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿತ್ತು. ಚಿತ್ರನಟ ಶ್ರೀನಾಥ್ ಅವರು ಚಾಮುಂಡೇಶ್ವರಿ ದೇವರ ಪ್ರತಿಮೆಗೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ವಂದೇ ಮಾತರಂ ಹಾಗೂ ನಾಡ ಗೀತೆ ಹಾಡಲಾಯಿತು. ವಂದೇ ಮಾತರಂನ ಎರಡು ಚರಣಕ್ಕೆ ಮಾತ್ರ ಮ್ಯೂಸಿಕ್ ಸಿದ್ದಪಡಿಸಲಾಗಿತ್ತು. ಅದರ ನಂತರ ನಾಡಗೀತೆಯ ರೆಕಾರ್ಡ್ ಇರಿಸಲಾಗಿತ್ತು. ಅದರಂತೆ ಗಾಯಕಿಯರು ವಂದೇ ಮಾತರಂನ ಎರಡು ಚರಣ ಹಾಡಬೇಕಾಗಿತ್ತು. ತದನಂತರ ನಾಡಗೀತೆ ಪ್ರಾರಂಭಿಸಬೇಕಾಗಿತ್ತು.

ಗಾಯಕಿಯರು ವಂದೇ ಮಾತರಂನ ಎರಡು ಚರಣ ಹಾಡಿದ ನಂತರ, ನಾಡಗೀತೆ ಮ್ಯೂಸಿಕ್ ಪ್ರಾರಂಭವಾಗಿತ್ತು. ಆದರೆ ಗಾಯಕಿಯರು ಮಾತ್ರ ವಂದೇ ಮಾತರಂ ಹಾಡುವುದನ್ನು ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಮ್ಯೂಸಿಕ್ ಬಂದ್ ಮಾಡಲಾಯಿತು. ಗಾಯಕಿಯರು ಪೂರ್ಣ ವಂದೇ ಮಾತರಂ ಹಾಡಿದರು. ಇದಾದ ನಂತರ ನಾಡಗೀತೆ ಆರಂಭವಾಯಿತು.

ಆಕ್ಷೇಪ : ವಂದೇ ಮಾತರಂನ ಎರಡು ಚರಣ ಹಾಡಲು ಮಾತ್ರ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಗೀತೆ ಹಾಡಿದ್ದು ಸರಿಯಲ್ಲವೆಂದು ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮ ಬಹಿಷ್ಕರಿಸಿ ವೇದಿಕೆಯಿಂದ ಹೊರ ನಡೆದರು. ಸದರಿ ಘಟನೆಯಿಂದ ಕಾರ್ಯಕ್ರಮದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಾಗರಿಕರ ಅಸಮಾಧಾನ : ನಾಡಿನ ಅಧಿ ದೇವತೆ ಚಾಮುಂಡೇಶ್ವರಿ ದೇವರನ್ನು ಆರಾಧಿಸಿ ನವರಾತ್ರಿ ಸಂಭ್ರಮಕ್ಕೆ ಚಾಲನೆ ಕೊಡಬೇಕಾದ ವೇದಿಕೆಯಲ್ಲಿ, ಕಾಂಗ್ರೆಸ್ – ಬಿಜೆಪಿ ಪಕ್ಷಗಳ ‘ವಂದೇ ಮಾತರಂ’ ಗೀತೆಯ ರಾಜಕಾರಣಕ್ಕೆ ಆಸ್ಪದವಾಗಿದ್ದಕ್ಕೆ ಶಿವಮೊಗ್ಗದ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.

‘ನಾಡಹಬ್ಬದ ವೇದಿಕೆಯೂ ಕೇವಲ ರಾಜಕಾರಣಿಗಳು, ಅಧಿಕಾರಿಗಳ ವೇದಿಕೆಯಲ್ಲ. ಇಡೀ ನಾಗರಿಕರ ವೇದಿಕೆಯಾಗಿದೆ. ನಮ್ಮೆಲ್ಲರ ಪ್ರತಿನಿಧಿಗಳಾಗಿ ಅವರು ವೇದಿಕೆ ಮೇಲಿದ್ದಾರೆ. ಇದರ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕಾಗಿತ್ತು. ಧಾರ್ಮಿಕ ವೇದಿಕೆಯನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ರಾಜಕಾರಣಿಗಳ ಈ ವರ್ತನೆ ಸರ್ವಥಾ ಸರಿಯಲ್ಲ’ ಎಂದು ಗೃಹಿಣಿ ನಾಗರತ್ನ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾಡ ಹಬ್ಬದ ಧಾರ್ಮಿಕ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ವಿಷಯಕ್ಕೆ ದೇವರ ವೇದಿಕೆ ಮೇಲೆ ರಾಜಕೀಯ ಸಂಘರ್ಷ ಹಾಗೂ ದ್ವೇಷ ಮಾಡುವುದು ಸರಿಯಲ್ಲ. ಅಡ್ಡಿ ಪಡಿಸುವುದು ಸರಿಯಾದ ನಡೆಯಲ್ಲ… ರಾಜಕೀಯ ವೇದಿಕೆಯಲ್ಲಿ ರಾಜಕೀಯವಾಗಿ ಸಂಘರ್ಷ ನಡೆಸಲಿ…’ ಎಂದು ರಂಗನಾಥ್ ಎಂಬುವರು ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಹಾಕಿದ ಸಂದೇಶದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

‘ನಾಡಹಬ್ಬ ದಸರಾ ಆಚರಣೆ ದೇವತೆಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಸಂತೋಷವಾಗಿ ಆಚರಿಸಬೇಕು. ಎಲ್ಲ ಜನತೆ ಸಂಭ್ರಮ ಪಡಬೇಕು. ಇದರಲ್ಲಿ ಲಾಭ ನಷ್ಟದ ರಾಜಕೀಯ ಬೆರೆಸಬಾರದು. ಪಾಲಿಕೆ ಆಡಳಿತ ಮುಂಜಾಗ್ರತೆ ವಹಿಸಬೇಕಿತ್ತು. ಒಟ್ಟಾರೆ ರಾಜಕೀಯದಿಂದ ಆರಂಭದ ದಿನವೇ ವಿಘ್ನ ಎದುರಾಗಿದೆ. ತಾಯಿ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆ ಬುದ್ದಿ ಕೊಡಲಿ. ಮುಂದಿನ ಎಲ್ಲ ಕಾರ್ಯಕ್ರಮಗಳು ಶಾಂತವಾಗಿ ನಡೆಯಲಿ’ ಎಂದು ಮಾಜಿ ಕಾರ್ಪೋರೇಟರ್ ಶ್ಯಾಂ ಸುಂದರ್ ಅವರು ವ್ಯಾಟ್ಸಾಪ್ ಗ್ರೂಪ್ ನ  ಸಂದೇಶದಲ್ಲಿ ತಿಳಿಸಿದ್ದಾರೆ.

ಗಾಯಕಿಯರಿಗೆ ಸೂಚಿಸಿದ್ದು ಯಾರು? : ವಂದೇ ಮಾತರಂ ಗೀತೆಯ ಎರಡು ಚರಣ ಹಾಡಲು ಮಾತ್ರ ಮ್ಯೂಸಿಕ್ ಸಿದ್ದಪಡಿಸಲಾಗಿತ್ತು. ಆದರೆ ಗಾಯಕಿಯರು ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಗೀತೆ ಹಾಡಿದರು. ಪೂರ್ಣ ಪ್ರಮಾಣದಲ್ಲಿ ಗೀತೆ ಹಾಡಲು ಇವರಿಗೆ ಬಿಜೆಪಿ ಪಕ್ಷವೇನಾದರೂ ಮೊದಲೇ ಸೂಚಿಸಿತ್ತ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಒಟ್ಟಾರೆ ನಾಡಹಬ್ಬ ದಸರಾ ವೇದಿಕೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಆರಂಭವಾಗದ ಕಾರ್ಯಕ್ರಮವು, ‘ವಂದೇ ಮಾತರಂ’ ಗೀತೆ ಗಾಯನದ ರಾಜಕಾರಣದ ವಿಘ್ನ ಎದುರಾಗಿದ್ದು ಪ್ರಜ್ಞಾವಂತ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದ್ದಂತೂ ಸತ್ಯವಾಗಿದೆ.

 

ಗಾಯಕಿಯರಿಗೆ ಸೂಚಿಸಿದ್ದು ಯಾರು?

*** ವಂದೇ ಮಾತರಂ ಗೀತೆಯ ಎರಡು ಚರಣ ಹಾಡಲು ಮಾತ್ರ ಪಾಲಿಕೆ ಆಡಳಿತ ಮ್ಯೂಸಿಕ್ ಸಿದ್ದಪಡಿಸಿತ್ತು. ಆದರೆ ವೇದಿಕೆ ಮೇಲೆ ಗಾಯಕಿಯರು ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಗೀತೆ ಹಾಡಿದರು. ಪೂರ್ಣ ಪ್ರಮಾಣದಲ್ಲಿ ಗೀತೆ ಹಾಡಲು ಇವರಿಗೆ ಬಿಜೆಪಿ ಪಕ್ಷದ ಯಾವುದಾದರೂ ನಾಯಕರು ಸೂಚಿಸಿದ್ದರೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

Shivamogga: ‘Vande Mataram’ song becomes a political issue even on the state festival stage – Citizens express outrage! | Shivamogga, October 11: Conscious citizens of Shivamogga have expressed outrage over the fact that the stage for the state festival Dasara became the setting for a political dispute between the Congress and the BJP regarding the ‘Vande Mataram’ song. They have voiced their displeasure on social media regarding the conduct of the political leaders.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *